ಕರ್ನಾಟಕ

karnataka

ETV Bharat / bharat

ಡಿಸಿಎಂ ಲಕ್ಷ್ಮಣ್​ ಸವದಿ ಮೊದಲು ಇತಿಹಾಸ ಅರ್ಥಮಾಡಿಕೊಳ್ಳಲಿ: ಸಂಜಯ್​ ರಾವತ್ - savadis mumbai is ours statment

ಮುಂಬೈನಲ್ಲಿ ಕನ್ನಡ ಶಾಲೆ ಇದ್ದು, ಒಂದು ಸಂಸ್ಥೆ ಇದೆ. ಆದರೆ ಬೆಳಗಾವಿಯಲ್ಲಿ ಈ ಪರಿಸ್ಥಿತಿ ಇಲ್ಲ. ಈ ಹಿನ್ನೆಲೆ ಕರ್ನಾಟಕದ ಉಪಮುಖ್ಯಮಂತ್ರಿ ಮುಂಬೈಗೆ ಬಂದು ಇಲ್ಲಿನ ಕನ್ನಡಿಗರೊಂದಿಗೆ ಚರ್ಚಿಸಿದ್ದಾರೆ. ಮುಂಬೈನಲ್ಲಿರುವ ಕನ್ನಡಿಗರು ಬೆಳಗಾವಿಗೆ ಬರಬೇಕು ಎಂಬುದು ಅವರ ಅಭಿಲಾಷೆಯಾಗಿದೆ ಎಂದು ಶಿವಸೇನೆ ಸಂಸದ ಸಂಜಯ್​ ರಾವತ್​ ಹೇಳಿದ್ದಾರೆ.

ಶಿವಸೇನೆ ಸಂಸದ ಸಂ ಶಿವಸೇನೆ ಸಂಸದ ಸಂಜಯ್ ರೌತ್ಜಯ್ ರೌತ್
ಶಿವಸೇನೆ ಸಂಸದ ಸಂಜಯ್ ರೌತ್

By

Published : Jan 28, 2021, 11:54 AM IST

Updated : Jan 28, 2021, 12:11 PM IST

ಮುಂಬೈ: ಕರ್ನಾಟಕದ ಉಪಮುಖ್ಯಮಂತ್ರಿ ಲಕ್ಷ್ಮಣ್​ ಸವದಿ ಮೊದಲು ಇತಿಹಾಸವನ್ನು ಅರ್ಥಮಾಡಿಕೊಳ್ಳಲಿ. ಮುಂಬೈನಲ್ಲಿ ಕನ್ನಡಿಗರಿಗೆ ಬೇಧ-ಭಾವ ಮಾಡಲಾಗುತ್ತಿಲ್ಲ ಎಂದು ಹೇಳುವ ಮೂಲಕ ಶಿವಸೇನೆ ಸಂಸದ ಸಂಜಯ್​ ರಾವತ್​ ಸವದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಶಿವಸೇನೆ ಸಂಸದ ಸಂಜಯ್ ರಾವತ್ ಪ್ರತಿಕ್ರಿಯೆ

ಮುಂಬೈನಲ್ಲಿ ಕನ್ನಡ ಶಾಲೆ ಇದ್ದು, ಒಂದು ಸಂಸ್ಥೆ ಸಹ ಇದೆ. ಆದರೆ ಬೆಳಗಾವಿಯಲ್ಲಿ ಈ ಪರಿಸ್ಥಿತಿ ಇಲ್ಲ. ಈ ಹಿನ್ನೆಲೆ ಕರ್ನಾಟಕದ ಉಪಮುಖ್ಯಮಂತ್ರಿ ಮುಂಬೈಗೆ ಬಂದು ಇಲ್ಲಿನ ಕನ್ನಡಿಗರೊಂದಿಗೆ ಚರ್ಚಿಸಿದ್ದಾರೆ. ಮುಂಬೈನಲ್ಲಿರುವ ಕನ್ನಡಿಗರು ಬೆಳಗಾವಿಗೆ ಬರಬೇಕು ಎಂಬುದು ಅವರ ಅಭಿಲಾಷೆಯಾಗಿದೆ. ಕರ್ನಾಟಕ ಸರ್ಕಾರಕ್ಕೆ ನೆನಪಿರಲಿ, ಈಗ ಇಲ್ಲಿರುವುದು ಠಾಕ್ರೆ ಸರ್ಕಾರವೆಂಬುದು ಎಂದು ಟಾಂಗ್​ ನೀಡಿದ್ದಾರೆ.

ಓದಿ: ನಾವು ಮುಂಬೈ ಕರ್ನಾಟಕದವರು, ಮುಂಬೈ ನಮ್ಮದು: ಮಹಾ ಸಿಎಂಗೆ ಡಿಸಿಎಂ ಸವದಿ ತಿರುಗೇಟು‌

ಲಕ್ಷ್ಮಣ್​ ಸವದಿ ಹೇಳಿದ್ದೇನು ?

ಮುಂಬೈಯನ್ನು ಕರ್ನಾಟಕಕ್ಕೆ ಸೇರಿಸಬೇಕು. ಅದು ಆಗುವವರೆಗೂ, ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು. ನಾನು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದರು.

Last Updated : Jan 28, 2021, 12:11 PM IST

ABOUT THE AUTHOR

...view details