ಮುಂಬೈ:ಅರುಣಾಚಲ ಪ್ರದೇಶಕ್ಕೆ ನುಸುಳಿ ಚೀನಾ 100 ಮನೆಗಳ ಗ್ರಾಮವನ್ನು ನಿರ್ಮಿಸಿದೆ. ಮೊದಲು ಅದನ್ನು ಕಿತ್ತು ಹಾಕಿ ನಂತರ ಮಹಾರಾಷ್ಟ್ರ ವಿಕಾಸ್ ಅಘಾಡಿಯನ್ನು ಕಿತ್ತುಹಾಕುವ ಕುರಿತು ಮಾತನಾಡಿ ಎಂದು 'ಸಾಮ್ನಾ' ದಿನಪತ್ರಿಕೆ ಸಂಪಾದಕೀಯಲ್ಲಿ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ವಿರುದ್ದ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.
ಮೊದಲು ಗಡಿಯಲ್ಲಿ ಚೀನಾ ನಿರ್ಮಿಸಿರುವ ಗ್ರಾಮವನ್ನು ಕಿತ್ತುಹಾಕಿ, ನಂತರ ಎಮ್ವಿಎ ಬಗ್ಗೆ ಮಾತ್ನಾಡಿ: ನಡ್ಡಾಗೆ ಶಿವಸೇನೆ ಟಾಂಗ್
ಮಹಾರಾಷ್ಟ್ರ ವಿಕಾಸ್ ಅಘಾಡಿಯನ್ನು ಕಿತ್ತುಹಾಕುವ ಕುರಿತು ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ, ಮೊದಲು ಅರುಣಾಚಲ ಪ್ರದೇಶದಲ್ಲಿ ಚೀನಾ ನಿರ್ಮಿಸಿರುವ ಗ್ರಾಮವನ್ನು ಕಿತ್ತು ಹಾಕಿ ನಂತರ ಮಹಾ ಸರ್ಕಾರವನ್ನು ಕಿತ್ತುಹಾಕುವ ಬಗ್ಗೆ ಮಾತನಾಡಿ ಎಂದು ಕಿಡಿಕಾರಿದೆ.
ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ, ಮಹಾರಾಷ್ಟ್ರದ ಮಹಾವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸುವ ಕುರಿತು ಮಾತನಾಡಿದ್ದರು. ಈ ಕುರಿತು ಕಿಡಿಕಾರಿರುವ ಶಿವಸೇನೆ, 365 ದಿನಗಳೂ ಭಾರತೀಯ ಜನತಾ ಪಕ್ಷ ಕೇವಲ ಚುನಾವಣೆ ಬಗ್ಗೆ ಯೋಚಿಸುತ್ತದೆ. ದೇಶದಲ್ಲಿ ಇತರೆ ಸಮಸ್ಯೆಗಳಿವೆ. ಹಲವು ಪ್ರಶ್ನೆಗಳಿವೆ. ಇದನ್ನು ಗಂಭೀರವಾಗಿ ಚರ್ಚಿಸಿ ಪ್ರಧಾನಿ ಮೋದಿ ಅವರು ಅಂತಿಮ ಮಾರ್ಗದರ್ಶನ ನೀಡಿದ್ದರೆ ದೇಶಕ್ಕೆ ಮಾರ್ಗದರ್ಶನ ಸಿಗುತ್ತಿತ್ತು ಎಂದು ಶಿವಸೇನೆ ಕಿಡಿಕಾರಿದೆ.
ಅರುಣಾಚಲ ಪ್ರದೇಶದಲ್ಲಿ 4-5 ಕಿ.ಮೀ.ವರೆಗೆ ಒಳಗೆ ನುಸುಳುವ ಮೂಲಕ ಚೀನಾ 100 ಮನೆಗಳ ಗ್ರಾಮವನ್ನು ನಿರ್ಮಿಸಿದೆ. ಇದು ಚೀನಾದ ನೇರ ಹೇರಿಕೆ. ಮೊದಲು ಆ ಗ್ರಾಮವನ್ನು ಕಿತ್ತುಹಾಕಿ, ನಂತರ ಮಹಾರಾಷ್ಟ್ರ ವಿಕಾಸ್ ಅಘಾಡಿ(MVA)ಯನ್ನು ಕಿತ್ತುಹಾಕುವ ಭಾಷೆ ಬಳಸಿ, ಸತತ ಎರಡು ವರ್ಷಗಳಿಂದ ಮಾಹಾ ಸರ್ಕಾರವನ್ನು ಕಿತ್ತುಹಾಕುವುದಾಗಿ ಹೇಳಿದರೂ, ಠಾಕ್ರೆ ಸರ್ಕಾರ ಬಲಿಷ್ಠವಾಗಿದೆ. ಆದ್ದರಿಂದ ಎಚ್ಚರಿಕೆಯಿಂದಿರಿ ಎಂದು ಭಾರತೀಯ ಜನತಾ ಪಕ್ಷಕ್ಕೆ ಶಿವಸೇನೆ ಎಚ್ಚರಿಕೆ ನೀಡಿದೆ.