ಕರ್ನಾಟಕ

karnataka

ETV Bharat / bharat

13ನೇ ವಯಸ್ಸಿನಲ್ಲಿ ಅತ್ಯಾಚಾರಕ್ಕೊಳಗಾದವಳಿಗೆ ಹೊಸ ಬಾಳು ನೀಡಿದ ಯುವಕ! - ಅತ್ಯಾಚಾರಕ್ಕೊಳಗಾದ ಬಾಲಕಿ ಜತೆ ಇದೀಗ ವ್ಯಕ್ತಿ ಮದುವೆ

ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಬೆಂಬಲಕ್ಕೆ ನಿಂತಿದ್ದ ಯುವಕನೋರ್ವ ಇದೀಗ ಆಕೆಯ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾನೆ.

Swapna starting a new life in Kultuli
Swapna starting a new life in Kultuli

By

Published : Nov 3, 2020, 10:09 PM IST

ಕೋಲ್ಕತ್ತಾ:ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಅತ್ಯಾಚಾರಕ್ಕೊಳಗಾಗಿದ್ದ ಯುವತಿಯೋರ್ವಳನ್ನು ಇದೀಗ ಯುವಕನೋರ್ವ ಮದುವೆಯಾಗಿ ಹೊಸ ಬಾಳು ನೀಡಿದ್ದಾನೆ. ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿದೆ.

ಕುಲ್ತಾಲಿಯ ಹೆಣ್ಣುಮಗಳು​ ತಾಯಿಯ ಗರ್ಭದಲ್ಲಿದ್ದಾಗ ಈಕೆಯ ತಂದೆ ಬೇರೆ ಮಹಿಳೆ ಜತೆ ಮದುವೆಯಾಗಿ ಕುಟುಂಬವನ್ನು ಬಿಟ್ಟು ಹೋಗುತ್ತಾನೆ. ಆಕೆ ಹುಟ್ಟುತ್ತಿದ್ದಂತೆ ಆಕೆಯ ತಾಯಿ ಕೂಡ ಸಾವನ್ನಪ್ಪುತ್ತಾಳೆ. ನಂತರ ಚಿಕ್ಕಮ್ಮನ ಮನೆಯಲ್ಲಿ ಬೆಳೆಯುತ್ತಾಳೆ. 13ನೇ ವಯಸ್ಸಿನಲ್ಲಿದ್ದ ವೇಳೆ ಆಕೆಯ ಅಜ್ಜ ಮೇಲಿಂದ ಮೇಲೆ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರವೆಸಗುತ್ತಾನೆ.

ಈ ವೇಳೆ ಶಾಲಾ ಸ್ನೇಹಿತ ಬಿಪ್ಲಾಬ್​ ಆಕೆಗೆ ಸಹಾಯ ಮಾಡಿದ್ದು, ಇದೀಗ ಅವಳನ್ನೇ ಮದುವೆ ಮಾಡಿಕೊಂಡು ಹೊಸ ಬಾಳು ನೀಡಿದ್ದಾನೆ.

ABOUT THE AUTHOR

...view details