ಮುಂಬೈ: ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರು ತಮ್ಮ ಪಕ್ಷದ ಎಲ್ಲ ಘಟಕ ಮತ್ತು ಕೋಶಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಿದ್ದಾರೆ ಎಂದು ಎನ್‌ಸಿಪಿಯ ಹಿರಿಯ ನಾಯಕ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.
ಪಕ್ಷದ ಎಲ್ಲ ಘಟಕಗಳನ್ನು ವಿಸರ್ಜಿಸಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್
"ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಅವರ ಅನುಮೋದನೆಯೊಂದಿಗೆ, ಎಲ್ಲ ಘಟಕಗಳು ಮತ್ತು ಕೋಶಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜನೆ ಮಾಡಲಾಗಿದೆ" ಎಂದು ಎನ್‌ಸಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಫುಲ್ ಪಟೇಲ್ ಟ್ವೀಟ್ ಮಾಡಿದ್ದಾರೆ.
Sharad Pawar Dissolves All Units Of Party, Days After Shiv Sena Coup
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಆಘಾಡಿ ಸರ್ಕಾರದ ಪತನವಾಗಿ ಮೂರು ವಾರಗಳ ನಂತರ ಎನ್‌ಸಿಪಿಯ ಎಲ್ಲ ಘಟಕ ಮತ್ತು ಕೊಶಗಳನ್ನು ವಿಸರ್ಜನೆ ಮಾಡಿದ್ದೇಕೆ ಎಂಬುದನ್ನು ಮಾತ್ರ ಮಾಜಿ ಕೇಂದ್ರ ಸಚಿವ ಪಟೇಲ್ ಬಹಿರಂಗಪಡಿಸಲಿಲ್ಲ.
ಎನ್‌ಸಿಪಿಯು ಶಿವಸೇನೆ ನೇತೃತ್ವದ ಸಮ್ಮಿಶ್ರ ಸರ್ಕಾರದ ಪ್ರಮುಖ ಅಂಗ ಪಕ್ಷವಾಗಿತ್ತು. ಜೂನ್ ಅಂತ್ಯದಲ್ಲಿ ಉದ್ಧವ್ ಠಾಕ್ರೆ ವಿರುದ್ಧ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಶಾಸಕರ ಒಂದು ಬಣ ಬಂಡಾಯವೆದ್ದು ಹೊಸ ಸರ್ಕಾರ ಸ್ಥಾಪನೆಯಾಯಿತು.