ಕರ್ನಾಟಕ

karnataka

ETV Bharat / bharat

ವಧು-ವರರಿಗೆ ಆನ್​ಲೈನ್ ಮೂಲಕವೇ ಉಡುಗೊರೆ; PhonePe ಮೂಲಕ ಹಣ ಪಾವತಿ!

ಬಿಹಾರದ ಹಳ್ಳಿವೊಂದರಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಫೋನ್​ ಪೇ ಮೂಲಕ ವಧು-ವರರಿಗೆ ಉಡುಗೊರೆ ನೀಡಲಾಗಿದ್ದು, ಎಲ್ಲರ ಗಮನ ಸೆಳೆದಿದೆ.

digital payment to bride and groom in Gopalganj
digital payment to bride and groom in Gopalganj

By

Published : Apr 27, 2022, 7:35 PM IST

ಗೋಪಾಲ್​ಗಂಜ್​(ಬಿಹಾರ): ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ವಧು-ವರರಿಗೆ ಅನೇಕ ರೀತಿಯ ಉಡುಗೊರೆಗಳನ್ನು ನೀಡುವುದು ಸರ್ವೇ ಸಾಮಾನ್ಯ. ಲಕೋಟೆಯಲ್ಲಿ ಹಣ, ಬಟ್ಟೆ, ಅಥವಾ ಇತರೆ ವಸ್ತುಗಳನ್ನು ನೀಡ್ತಾರೆ. ಆದರೆ, ಬಿಹಾರದ ಗೋಪಾಲ್​ಗಂಜ್​​ನಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದು ವಿಭಿನ್ನವಾಗಿದ್ದು, ವಧು-ವರರಿಗೆ ಉಡುಗೊರೆ ನೀಡುವ ವಿಧಾನ ಕೂಡ ತುಂಬಾ ವಿಶೇಷವಾಗಿತ್ತು.


ಬಿಹಾರದ ಗೋಪಾಲ್​ಗಂಜ್​​ನಲ್ಲಿ ನಡೆದ ವಿವಾಹ ಕಾರ್ಯಕ್ರಮವೊಂದು ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕನಸು ನನಸು ಮಾಡುವ ರೀತಿಯಲ್ಲಿ ನಡೆದಿದೆ. ಮದುವೆ ಸಮಾರಂಭದಲ್ಲಿ PhonePe ಮೂಲಕ ವಧು-ವರರಿಗೆ ಉಡುಗೊರೆ ನೀಡಲಾಗಿದ್ದು, ಕೆಲವರು, ತಮ್ಮ ಮೊಬೈಲ್​ನಿಂದ ಹಣ ವರ್ಗಾವಣೆ ಮಾಡಿದ್ದಾರೆ. ಸಮಾರಂಭದಲ್ಲಿ PhonePe Accepted Here ಎಂಬ ಬೋರ್ಡ್ ಸಹ ಹಾಕಲಾಗಿತ್ತು.

ಇದನ್ನೂ ಓದಿ:'ಹಿಂದಿ ರಾಷ್ಟ್ರೀಯ ಭಾಷೆಯಲ್ಲ' ಎಂದ ಸುದೀಪ್‌ಗೆ ಅಜಯ್‌ ದೇವಗನ್ ಖಾರ ಪ್ರತಿಕ್ರಿಯೆ; ನೆಟ್ಟಿಗರಿಂದ ತರಾಟೆ

ಈ ಕುರಿತು ಮಾತನಾಡಿರುವ ಆದಿತ್ಯ ಕುಮಾರ್, ಪ್ರಧಾನಿಯವರ ಡಿಜಿಟಲ್ ಇಂಡಿಯಾ ಮತ್ತು ನಗದು ರಹಿತ ವಹಿವಾಟು ಮಾತುಗಳಿಂದ ಪ್ರೇರಿತರಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಅನೇಕ ರೀತಿಯ ಪ್ರಯೋಜನೆಗಳಿದ್ದು, ಲೆಕ್ಕಾಚಾರದಲ್ಲಿ ಯಾವುದೇ ರೀತಿಯ ದೋಷ ಉಂಟಾಗುವುದಿಲ್ಲ. ಎಲ್ಲರೂ ಸುಲಭವಾಗಿ ಹಾಗೂ ತ್ವರಿತವಾಗಿ ಹಣ ಪಾವತಿ ಮಾಡಬಹುದಾಗಿದೆ ಎಂದರು.

ABOUT THE AUTHOR

...view details