ತಿರುವನಂತಪುರಂ(ಕೇರಳ):ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧಿಕೃತ ನಿವಾಸದಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಅಧಿಕಾರಿಯೊಬ್ಬರ ಗನ್ನಿಂದ ಆಕಸ್ಮಿಕವಾಗಿ ಮಂಗಳವಾರ ಗುಂಡು ಹಾರಿದೆ.
ಕೇರಳ ಸಿಎಂ ನಿವಾಸದಲ್ಲಿ ಆಕಸ್ಮಿಕವಾಗಿ ಗನ್ನಿಂದ ಹಾರಿದ ಗುಂಡು
ಕೇರಳ ಸಿಎಂ ನಿವಾಸದಲ್ಲಿ ಭದ್ರತಾ ಅಧಿಕಾರಿಯ ಗನ್ ಆಕಸ್ಮಿಕವಾಗಿ ಗುಂಡು ಹಾರಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಿಣರಾಯಿ ವಿಜಯನ್
ಭದ್ರತಾ ಅಧಿಕಾರಿ ತಮ್ಮ ಗನ್ ಸ್ವಚ್ಛಗೊಳಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮಂಗಳವಾರ ಬೆಳಗ್ಗೆ 9.15 ರ ಸುಮಾರಿಗೆ ಘಟನೆ ಸಂಭವಿಸಿದ್ದು, ಯಾರಿಗೂ ಗಾಯಗಳಾಗಿಲ್ಲ. ಈ ಸಮಯದಲ್ಲಿ ಮುಖ್ಯಮಂತ್ರಿಗಳು ನಿವಾಸದಲ್ಲಿ ಇರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಹಲವು ಸುತ್ತಿನ ಸಭೆಗಳ ಬಳಿಕ ನುಸುಳುಕೋರನ ಮೃತದೇಹ ಸ್ವೀಕರಿಸಿದ ಪಾಕಿಸ್ತಾನ