ವಾರಣಾಸಿ (ಉತ್ತರ ಪ್ರದೇಶ):ಭೀಕರ ಕೊರೊನಾ ಸಾಂಕ್ರಾಮಿಕದಿಂದಾಗಿ ವಿಶ್ವದ ಜನರು ಸಂಕಷ್ಟದಲ್ಲಿ ಸಿಲುಕಿದ್ದು, ಇದರ ನಡುವೆ ಜ್ಯೋತಿಷಿಗಳು ಮತ್ತೊಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಚಂದ್ರಗ್ರಹಣ ಸಂಭವಿಸಿದ 15 ದಿನಗಳ ಅವಧಿಯಲ್ಲಿ ಸೂರ್ಯಗ್ರಹಣ ಗೋಚರಿಸಲಿದ್ದು, ಇದು ಇಡೀ ಜಗತ್ತಿಗೆ ಹಾನಿಕಾರಕ ಎಂದು ಹೇಳುತ್ತಿದ್ದಾರೆ. ಆದರೆ ವೈಜ್ಞಾನಿಕವಾಗಿ ಈ ಬಗ್ಗೆ ಯಾವ ತಜ್ಞರೂ ಮಾಹಿತಿ ನೀಡಿಲ್ಲ.
ವರ್ಷದ ಮೊದಲ ಮೇ 26 ರಂದು ಚಂದ್ರಗ್ರಹಣವಾಗಿದ್ದು, ಜೂನ್ 10 ರಂದು ಸೂರ್ಯಗ್ರಹಣ ಸಂಭವಿಸಲಿದೆ. ಸಾಮಾನ್ಯವಾಗಿ ಎರಡು ಗ್ರಹಣಗಳ ನಡುವೆ ಕನಿಷ್ಠ 19 ದಿನಗಳ ಅಂತರವಿರುತ್ತದೆ. ಆದರೆ ಈ ಬಾರಿ 15 ದಿನಗಳ ಅಂತರದಲ್ಲೇ ಗ್ರಹಣ ಗೋಚಸಿರುವುರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಉತ್ತರ ಪ್ರದೇಶ ಮೂಲದ ಪಂಡಿತ್ ಪ್ರಸಾದ್ ದೀಕ್ಷಿತ್ ಜ್ಯೋತಿಶಾಚಾರ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಜೂನ್ 10ರಂದು ಗೋಚರವಾಗಲಿದೆ ವರ್ಷದ ಮೊದಲ ಸೂರ್ಯಗ್ರಹಣ