ಕರ್ನಾಟಕ

karnataka

ETV Bharat / bharat

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ರಂಜನ್ ಗೊಗೊಯ್ ನಿರ್ದೋಷಿ ಎಂದ ಸುಪ್ರೀಂ!

ಮಾಜಿ ಸಿಜೆಐ ರಂಜನ್ ಗೊಗೊಯ್ ಅವರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣದ ಹಿನ್ನೆಲೆಯಲ್ಲಿ, ನ್ಯಾಯಾಂಗದ ವಿರುದ್ಧದ ಸಂಚಿನ ಆರೋಪದ ಬಗ್ಗೆ 2019ರಲ್ಲಿ ಆರಂಭಿಸಿದ್ದ ಸುಮೊಟೊ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್ ಮುಕ್ತಾಯಗೊಳಿಸಿದೆ.

SC closes suo motu proceedings to probe larger conspiracy to frame ex-CJI Gogoi
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ರಂಜನ್ ಗೊಗೊಯ್ ನಿರ್ದೋಷಿ ಎಂದ ಸುಪ್ರೀಂ!

By

Published : Feb 18, 2021, 2:36 PM IST

ನವದೆಹಲಿ:ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ವಿರುದ್ಧ ಕೇಳಿಬಂದ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ನ್ಯಾಯಾಂಗದ ವಿರುದ್ಧ ಪಿತೂರಿ ನಡೆದಿದೆಯೇ ಎಂದು 2019ರಲ್ಲಿ ಸುಪ್ರೀಂಕೋರ್ಟ್ ಆರಂಭಿಸಿದ್ದ ಸುಮೋಟೋ ಪ್ರಕ್ರಿಯೆಯನ್ನು ವಜಾಗೊಳಿಸಲಾಗಿದೆ.

ಗೊಗೊಯ್ ಅವರನ್ನು ಸಿಲುಕಿಸುವ ಸಂಚಿಗೆ ಸಂಬಂಧಿಸಿದ ತನಿಖೆಯಲ್ಲಿ ಎರಡು ವರ್ಷ ಕಳೆದಿದ್ದು, ವಿದ್ಯುನ್ಮಾನ ದಾಖಲೆಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಗೌಲ್ ನೇತೃತ್ವದ ನ್ಯಾಯಪೀಠ ಹೇಳಿದೆ.

ಸಿಜೆಐ ಎಸ್‌ಎ ಬೊಬ್ಡೆ ನೇತೃತ್ವದ ಮೂವರು ಸದಸ್ಯರ ಸಮಿತಿಯು ನಿವೃತ್ತ ಸಿಜೆಐ ಗೊಗೊಯ್ ಅವರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ತನಿಖೆ ಮುಕ್ತಾಯಗೊಳಿಸುವಾಗ ಗೊಗೊಯ್ ಅವರನ್ನು ನಿರ್ದೋಷಿ ಎಂದು ವರದಿ ಸಲ್ಲಿಸಿದೆ.

ಮಾಜಿ ಮುಖ್ಯ ನ್ಯಾಯಮೂರ್ತಿ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಪ್ರಕರಣ ನ್ಯಾಯಾಂಗ ತನಿಖೆಯಲ್ಲಿ ಎರಡು ವರ್ಷಗಳು ಕಳೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯುನ್ಮಾನ ದಾಖಲೆಗಳನ್ನು ಸಾಕ್ಷಿಯಾಗಿ, ಪಡೆಯುವ ಸಾಧ್ಯತೆ ತೀರಾ ಕಡಿಮೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೊಗೊಯ್ ವಿರುದ್ಧ ಪಿತೂರಿ ನಡೆಸಲಾಗಿತ್ತೇ ಎಂದು ತನಿಖೆ ಮಾಡಲು ವಾಟ್ಸಾಪ್ ಸಂದೇಶಗಳಂತಹ ಎಲೆಕ್ಟ್ರಾನಿಕ್ ದಾಖಲೆಗಳನ್ನು ನಿವೃತ್ತ ನ್ಯಾಯಮೂರ್ತಿ ಎ.ಕೆ.ಪಾಟ್ನಾಯಕ್ ನೇತೃತ್ವದ ಸಮಿತಿ ಪಡೆಯಲು ವಿಫಲವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ABOUT THE AUTHOR

...view details