ಮುಂಬೈ: ಎನ್‌ಸಿಬಿ ಮಾಜಿ ಪ್ರಧಾನ ನಿರ್ದೇಶಕ ಸಮೀರ್ ವಾಂಖೆಡೆ ಅವರು ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ವಿರುದ್ಧ ನಿನ್ನೆ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಲಿತ ವ್ಯಕ್ತಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಮೀರ್ ವಾಂಖೆಡೆ ಅವರ ದೂರಿನ ಅನ್ವಯ ಗೋರೆಗಾಂವ್ ಪೊಲೀಸರು ಐಪಿಸಿ ಸೆಕ್ಷನ್ 500, 501ರ 3 (1)(ಯು) ಅಡಿ್ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಗೋರೆಗಾಂವ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಈ ಬಗ್ಗೆ ತನಿಖೆ ನಡೆಸಲಿದ್ದಾರೆ.
ಎಫ್‌ಐಆರ್‌ನಲ್ಲಿ ವಾಂಖೆಡೆ ಅವರು, 'ನವಾಬ್ ಮಲಿಕ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಗೂ ಯಾವುದೇ ಪಕ್ಷದ ಸಭೆಯಲ್ಲಿ ನನ್ನ ಕುಟುಂಬವನ್ನು ಪದೇ ಪದೆ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದರು. ಅವರ ಜಾತಿ ಸಂಬಂಧಿತ ಭಾಷಣದಿಂದ ನನ್ನ ಕುಟುಂಬವು ಖಿನ್ನತೆ ಮತ್ತು ಹತಾಶೆಯಿಂದ ಬಳಲುತ್ತಿದೆ' ಎಂದು ಉಲ್ಲೇಖಿಸಿದ್ದಾರೆ.