ರಾಂಪುರ್(ಉತ್ತರ ಪ್ರದೇಶ) :ಹಾವಿನ ದ್ವೇಷ 12 ವರುಷ ಎನ್ನುವ ಪ್ರಸಿದ್ಧ ಕನ್ನಡ ಹಾಡೊಂದು ಇದೆ. ತಮಗೆ ತೊಂದರೆ ನೀಡಿದವರ ಮೇಲೆ ಸೇಡು ತೀರಿಸಿಕೊಳ್ಳಲು ಹಾವುಗಳು ಮುಂದಾಗುತ್ತವೆ ಎಂಬುದನ್ನ ನಾವು ಈಗಾಗಲೇ ಅನೇಕ ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ, ಇಲ್ಲೊಂದು ಜ್ವಲಂತ ಉದಾಹರಣೆ ನಮ್ಮ ಕಣ್ಮುಂದೆ ಇದೆ.
ಉತ್ತರ ಪ್ರದೇಶದ ರಾಂಪುರ್ದ ಮಿರ್ಜಾಪುರ ಗ್ರಾಮದ ನಿವಾಸಿ ಎಹ್ಸಾನ್ ಬಬ್ಲು ಎಂಬಾತ ಕಳೆದ ಕೆಲ ತಿಂಗಳ ಹಿಂದೆ ಕೃಷಿ ಜಮೀನಿನಲ್ಲಿ ಕೆಲಸ ಮಾಡ್ತಿದ್ದನು. ಈ ವೇಳೆ ಇದಕ್ಕಿದ್ದಂತೆ ಎರಡು ಜೋಡಿ ಹಾವು ಒಟ್ಟಾಗಿ ಕಾಣಿಸಿಕೊಂಡಿವೆ. ಬಬ್ಲು ತನ್ನ ಪ್ರಾಣ ಉಳಿಸಿಕೊಳ್ಳುವ ಉದ್ದೇಶದಿಂದ ಅವುಗಳ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಒಂದು ಹಾವು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಂದು ಅಲ್ಲಿಂದ ತಪ್ಪಿಸಿಕೊಂಡಿದೆ.
ಸಂಗಾತಿ ಹಾವು ಕೊಂದಿರೋದಕ್ಕೆ ಪ್ರತೀಕಾರ.. ಸೇಡು ತೀರಿಸಿಕೊಳ್ಳಲು 7 ಸಲ ಕಚ್ಚಿದ ನಾಗಿಣಿ! ಇದಾದ ಬಳಿಕ ವ್ಯಕ್ತಿಯ ಮೇಲೆ ತಪ್ಪಿಸಿಕೊಂಡ ಹಾವು ನಿರಂತರವಾಗಿ ದಾಳಿ ನಡೆಸಲು ಮುಂದಾಗಿದೆ. ಇಲ್ಲಿಯವರೆಗೆ ಸುಮಾರು 7 ಸಲ ಅದರಿಂದ ಕಚ್ಚಿಸಿಕೊಂಡಿದ್ದಾನೆ. ಪ್ರತಿ ಸಲ ಆತನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಜೀವ ಉಳಿದಿದೆ. ಹಾವಿನ ಸೇಡಿನ ವಿಷಯ ಇದೀಗ ರಾಂಪುರದಲ್ಲಿ ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ.
ಹಾವು ತನ್ನ ಮೇಲೆ ದಾಳಿ ನಡೆಸುವ ಭೀತಿಯಲ್ಲಿರುವ ಕಾರಣ ಕೂಲಿ ಕೆಲಸ ಮಾಡುವ ಬದಲು ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ನಾಗ-ನಾಗಿಣಿ ಒಟ್ಟಿಗೆ ಇದ್ದ ವೇಳೆ ದಾಳಿ ನಡೆಸಿರುವ ಕಾರಣ, ಗಂಡು ಹಾವು ಸಾವನ್ನಪ್ಪಿದ್ದು, ಇದೀಗ ಉಳಿದುಕೊಂಡಿರುವ ನಾಗಿಣಿ ಆತನ ಮೇಲೆ ದಾಳಿ ನಡೆಸ್ತಿದೆಯಂತೆ.
ಸೇಡು ತೀರಿಸಿಕೊಳ್ಳಲು ವ್ಯಕ್ತಿಗೆ ಏಳು ಸಲ ಕಚ್ಚಿದ ನಾಗಿಣಿ ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಜಮೀನಿನ ಮಾಲೀಕ ಸತ್ಯೇಂದ್ರ, ಬಬ್ಲುಗೆ ನಾಲ್ವರು ಪುಟ್ಟ ಮಕ್ಕಳಿದ್ದಾರೆ. ಹೊಟ್ಟೆ ಪಾಡಿಗಾಗಿ ಹೊಲದಲ್ಲಿ ದುಡಿಯುತ್ತಾನೆ. ಆದರೆ, ಇಲ್ಲಿಯವರೆಗೆ ಆತನಿಗೆ ಏಳು ಸಲ ಹಾವು ಕಚ್ಚಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿರುವ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ಹೇಳಿದ್ದಾರೆ. ಹಾವಿನ ಸೇಡಿನಿಂದ ಬಬ್ಲು ಪ್ರಾಣಕ್ಕೆ ಪ್ರತಿದಿನ ಅಪಾಯವಿದೆ ಎಂದಿದ್ದಾರೆ.