ಗುಂಟೂರು (ಆಂಧ್ರಪ್ರದೇಶ): ಜಿಲ್ಲೆಯ ಭಾರತ್‌ಪೇಟ್‌ನವರಾದ ರತೈಹ್ ಅವರು ಅಸ್ಸೋಂ ಕೃಷಿ ವಿಶ್ವವಿದ್ಯಾಲಯದಲ್ಲಿ ಫ್ಲಾಂಟ್ ಪೆಥಾಲಜಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು. ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಉಂಟಾಗುವ ತೀವ್ರ ಸ್ವರೂಪದ ನೀರಿನ ಕೊರತೆಯನ್ನು ಗಮನಿಸಿದ ಇವರು ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾದರು. ಹೀಗಾಗಿ ತಮ್ಮ ಮನೆಯನ್ನೇ ಜಲ ಸಂರಕ್ಷಣಾ ಕೇಂದ್ರವನ್ನಾಗಿ ಪರಿವರ್ತಿಸಿದರು.
ಮಳೆಗಾಲದಲ್ಲಿ ಮನೆಯ ಮೇಲ್ಛಾವಣಿಯ ಮೇಲೆ ಬೀಳುವ ಮಳೆನೀರನ್ನು ಶೇಖರಣೆ ಮಾಡಲು ಪ್ರಾರಂಭಿಸಿದರು. ಈ ನೀರಿ ಸಂಗ್ರಹಣೆಗೆ ಕೆಳಗೊಂದು ಟ್ಯಾಂಕ್ ನಿರ್ಮಿಸಿ, ಪಿವಿಸಿ ಪೈಪ್‌ಗಳನ್ನು ಅಳವಡಿಸಿದರು. ಬಳಿಕ ಮಳೆನೀರು ಸಂಸ್ಕರಣೆಗೆ ಫಿಲ್ಟರ್ ಅಳವಡಿಸಲಾಯಿತು.
ಮಳೆಗಾಲದಲ್ಲಿ ಟ್ಯಾಂಕ್ ತುಂಬಿ ನೀರು ವ್ಯರ್ಥವಾಗದಂತೆ ಕೆಳಭಾಗದಲ್ಲಿರುವ ಗುಂಡಿಗೆ ಸಂಪರ್ಕ ಕಲ್ಪಿಸಲಾಗಿದೆ. ಪ್ರತಿ ಹನಿ ನೀರನ್ನು ಫಿಲ್ಟರ್ ಮಾಡಿ ಟ್ಯಾಂಕ್‌ಗೆ ಕಳುಹಿಸಲಾಗುತ್ತದೆ. ಒಮ್ಮೆ ನೀರು ಟ್ಯಾಂಕಿಗೆ ಬಂದರೆ ಅದರಲ್ಲಿ ಬ್ಯಾಕ್ಟೀರಿಯಾ ಮತ್ತು ಇತರ ಹಾನಿಕಾರಕ ಸೂಕ್ಷ್ಮಾಣು ಜೀವಿಗಳು ಇರುವುದಿಲ್ಲ. ಈ ನೀರು ಕುಡಿಯಲು ತುಂಬಾ ಶುದ್ಧವಾಗಿರುತ್ತದೆ. ಅಲ್ಲದೇ ವರ್ಷವಿಡೀ ಈ ನೀರನ್ನು ಬಳಸುವುದರಿಂದ ಯಾವುದೇ ಅನಾರೋಗ್ಯವೂ ಬಾಧಿಸದು.
ಇದನ್ನೂ ಓದಿ:ಗಂಟೆಯಲ್ಲಿ 3,321 ಸಲ ದಂಡ ಹೊಡೆದು ವಿಶ್ವದಾಖಲೆ ನಿರ್ಮಿಸಿದ ಮಹಾರಾಷ್ಟ್ರದ ಯುವಕ
ನಿವೃತ್ತ ಪ್ರಾಧ್ಯಾಪಕ ರತೈಹ್ ಮಾತನಾಡಿ, "ಜಗತ್ತಿನ ಎಲ್ಲಾ ರೀತಿಯ ನೀರಿಗಿಂತ ಮಳೆ ನೀರು ತುಂಬಾ ಶುದ್ಧ. ಏಕೆಂದರೆ, ಇದರಲ್ಲಿ ಯಾವುದೇ ಹಾನಿಕಾರಕ ಲವಣಗಳು ಇದ್ರಲ್ಲಿ ಇರುವುದಿಲ್ಲ. ಈ ನೀರಿನಲ್ಲಿ ಬ್ಯಾಕ್ಟೀರಿಯಾಗಳೂ ಇರಲಾರವು. ಕುಡಿಯಲು ಇದಕ್ಕಿಂತ ಉತ್ತಮ ನೀರು ಬೇರೆ ಇಲ್ಲ. ಸಂಗ್ರಹವಾಗಿರುವ ನೀರನ್ನು ಈಗಾಗಲೇ ಹಲವು ಬಾರಿ ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ ಯಾವುದೇ ಕಲ್ಮಶ ಇಲ್ಲ ಎಂದು ತಿಳಿದುಬಂದಿದೆ. ಮಳೆಗಾಲದಲ್ಲಿ ಹಿಡಿದ ನೀರು ಒಂದು ಕುಟುಂಬಕ್ಕೆ ವರ್ಷವಿಡೀ ಕುಡಿಯಲು ಸಾಕಾಗುತ್ತದೆ. ನೀರು ಶುದ್ಧೀಕರಣ ಮಾಡುವ ಫಿಲ್ಟರ್, ಪೈಪ್ ಮತ್ತು ಟ್ಯಾಂಕ್‌ಗೆ ಒಟ್ಟು 40 ಸಾವಿರ ರೂ.ವರೆಗೆ ವೆಚ್ಚವಾಗುತ್ತದೆ" ಎಂದು ಅವರು ವಿವರಿಸಿದರು.