ಕರ್ನಾಟಕ

karnataka

ETV Bharat / bharat

ಕೃಷಿ ಕಾಯ್ದೆ ನಿಷೇಧ ಬೆನ್ನಲ್ಲೇ ಸಿಎಎ, ಆರ್ಟಿಕಲ್​​ 370 & ಯುಎಪಿಎ ಹಿಂಪಡೆದುಕೊಳ್ಳಲು ಹೆಚ್ಚಿದ ಒತ್ತಡ

ಕೃಷಿ ಕಾಯ್ದೆ ಹಿಂಪಡೆದುಕೊಳ್ಳುತ್ತಿದ್ದಂತೆ ಮುಸ್ಲಿಂ ಸಮುದಾಯ ಇದೀಗ ಆರ್ಟಿಕಲ್​ 370(Article-370) ಹಾಗೂ ಪೌರತ್ವ ತಿದ್ದುಪಡಿ(CAA) ಕಾಯ್ದೆ ಮರು ಸ್ಥಾಪನೆ ಮಾಡುವಂತೆ ಕೇಂದ್ರದ ಮೇಲೆ ಒತ್ತಾಯ ಹೇರಲು ಮುಂದಾಗಿದೆ.

Clamour grows to withdraw UAPA, CAA & restore 370
Clamour grows to withdraw UAPA, CAA & restore 370

By

Published : Nov 20, 2021, 4:53 PM IST

ನವದೆಹಲಿ:ವಿವಾದಿತ ಮೂರು ಕೃಷಿ ಕಾಯ್ದೆ(Repeal of 3 farm laws) ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸುತ್ತಿದ್ದಂತೆ ಇದೀಗ ಜಮ್ಮು-ಕಾಶ್ಮೀರದ ಆರ್ಟಿಕಲ್​ 370(Article 370), ಪೌರತ್ವ ಕಾಯ್ದೆ(Citizenship Amendment Act) ಹಾಗೂ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (UAPA) ಹಿಂಪಡೆದುಕೊಳ್ಳುವಂತೆ ದೊಡ್ಡ ಮಟ್ಟದ ಕೂಗು ಕೇಳಿ ಬರಲು ಶುರುವಾಗಿದೆ.

ಕೇಂದ್ರ ಸರ್ಕಾರ(Central Government) ಮೂರು ಕೃಷಿ ಕಾಯ್ದೆ ಜಾರಿಗೆ ತರುತ್ತಿದ್ದಂತೆ ದೇಶದ ವಿವಿಧ ಮೂಲೆಗಳಿಂದ ರೈತರು ಒಗ್ಗಟ್ಟಿನ ಹೋರಾಟ ನಡೆಸಿದ್ದರು. ಇದರ ಫಲವಾಗಿ ಇದೀಗ ಮೋದಿ ಸರ್ಕಾರ ದಿಢೀರ್​​ ಆಗಿ ಮೂರು ಕೃಷಿ ಕಾಯ್ದೆ ವಾಪಸ್​ ಪಡೆದುಕೊಳ್ಳುವುದಾಗಿ ಘೋಷಿಸಿದೆ. ಈ ನಿರ್ಧಾರವನ್ನು ಬಹುತೇಕರು ಸ್ವಾಗತಿಸಿದ್ದಾರೆ. ಇದರ ಬೆನ್ನಲ್ಲೇ ಮುಸ್ಲಿಂ ಸಂಘಟನೆ ಜಮಾತ್-ಇ- ಇಸ್ಲಾಮಿ​​-ಹಿಂದ್​​ ಸೇರಿದಂತೆ ಅನೇಕ ಸಂಘಟನೆಗಳು ಕೇಂದ್ರ ಸರ್ಕಾರದ ಮೇಲೆ ಮತ್ತೊಂದು ಒತ್ತಡ ಹೇರಲು ಶುರು ಮಾಡಿವೆ.

ಇದನ್ನೂ ಓದಿರಿ:ಇಮ್ರಾನ್ ಖಾನ್​​ ನನ್ನ 'ಹಿರಿಯ ಸಹೋದರ'... ವಿವಾದಕ್ಕೆ ಕಾರಣವಾಯ್ತು ನವಜೋತ್​ ಸಿಂಗ್​ ಹೇಳಿಕೆ

ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯ್ದೆ, ಪೌರತ್ವ ಕಾಯ್ದೆ ಹಾಗೂ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನದ ಆರ್ಟಿಕಲ್​ 370 ಮರು ಸ್ಥಾಪಿಸುವಂತೆ ಇದೀಗ ಮುಸ್ಲಿಂ ನಾಯಕರು ಒತ್ತಾಯ ಮಾಡುತ್ತಿದ್ದಾರೆ. ಜಮ್ಮು-ಕಾಶ್ಮೀರದಲ್ಲಿನ ಕೆಲ ಮುಸ್ಲಿಂ ನಾಯಕರು ಆರ್ಟಿಕಲ್​ 370 ಮರು ಸ್ಥಾಪನೆಗೆ ಮೋದಿ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆಂದು ತಿಳಿದು ಬಂದಿದೆ.

ಕೆಲ ವಾರಗಳಲ್ಲಿ ಸಂಸತ್​ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದ್ದು, ಸಿಎಎ, ಆರ್ಟಿಕಲ್​ 370 ಸೇರಿದಂತೆ ಕೆಲವೊಂದು ಮಸೂದೆ ವಾಪಸ್​ ಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರತಿಪಕ್ಷಗಳು ಸಜ್ಜಾಗಿವೆ ಎಂದು ತಿಳಿದು ಬಂದಿದೆ.

ಜಮ್ಮು-ಕಾಶ್ಮೀರದ ಪಿಡಿಪಿ ಮುಖ್ಯಸ್ಥೆ(PDP Mehbooba Mufti) ಮೆಹಬೂಬಾ ಮುಫ್ತಿ ಹಾಗೂ ನ್ಯಾಷನಲ್​ ಕಾನ್ಫರೆನ್ಸ್​​ನ ಫಾರೂಕ್​ ಅಬ್ದುಲ್ಲಾ(Farooq Abdullah) ಕೂಡ ಈ ಮಸೂದೆ ಹಿಂಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆಂದು ಹೇಳಲಾಗುತ್ತಿದೆ. ದೇಶದಲ್ಲಿ ಸಿಎಎ ಜಾರಿಗೊಂಡಾಗಿನಿಂದಲೂ ಮುಸ್ಲಿಂ ಸಮುದಾಯದ ಜನರು ವಿರೋಧಿಸುತ್ತಿದ್ದು, ಹಿಂಪಡೆದುಕೊಳ್ಳುವಂತೆ ಕೇಳಿಕೊಂಡಿದ್ದಾಗಿ ವರದಿಯಾಗಿದೆ.

ಜಮಾತ್​​-ಎ-ಇಸ್ಲಾಮಿ ಹಿಂದ್(Jamaat-e-Islami Hind) ಅಧ್ಯಕ್ಷ ಸೈಯದ್​ ಸಾದತುಲ್ಲಾ ಹುಸೇನಿ ಮಾತನಾಡಿದ್ದು, ಸಿಎಎ-ಎನ್​​ಸಿಆರ್​​ ಸೇರಿದಂತೆ ಅನೇಕ ಜನವಿರೋಧಿ ಹಾಗೂ ಸಾಂವಿಧಾನಿಕ ವಿರೋಧಿ ಕಾನೂನು ಹಿಂಪಡೆದುಕೊಳ್ಳುವಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತೇವೆ ಎಂದಿದ್ದಾರೆ.

ABOUT THE AUTHOR

...view details