ಕರ್ನಾಟಕ

karnataka

ಭಾರಿ ಮಳೆ ಹಿನ್ನೆಲೆ ಹೈದರಾಬಾದ್​ ನಗರದಲ್ಲಿ ರೆಡ್ ಅಲರ್ಟ್..!

By

Published : Jul 26, 2023, 8:53 PM IST

ಹೈದರಾಬಾದ್​ ನಗರದಲ್ಲಿ ಬುಧವಾರ ಭಾರಿ ಮಳೆಯಾಗಿದೆ. ನಾಳೆ ಕೂಡಾ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

RED ALERT
ಭಾರಿ ಮಳೆ ಹಿನ್ನೆಲೆ ಹೈದರಾಬಾದ್​ ನಗರದಲ್ಲಿ ರೆಡ್ ಅಲರ್ಟ್..!

ಭಾರಿ ಮಳೆ ಹಿನ್ನೆಲೆ ಹೈದರಾಬಾದ್​ ನಗರದಲ್ಲಿ ರೆಡ್ ಅಲರ್ಟ್..!

ಹೈದರಾಬಾದ್:ನಗರದಲ್ಲಿ ಬುಧವಾರ ಭಾರಿ ಮಳೆಯಾಗಿದೆ. ನಾಳೆ ಕೂಡಾ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹೈದರಾಬಾದ್ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಜೊತೆಗೆ ವಲಯವಾರು ಎಚ್ಚರಿಕೆಯನ್ನೂ ನೀಡಿದೆ. ಚಾರ್ಮಿನಾರ್ ವಲಯ, ಖೈರತಾಬಾದ್ ವಲಯ, ಎಲ್‌.ಬಿ. ನಗರ ವಲಯ ಹಾಗೂ ಸೆರಿಲಿಂಗಂಪಲ್ಲಿ ವಲಯದಲ್ಲಿ ಭಾರಿ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಕುಕಟ್ಪಲ್ಲಿ ವಲಯಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಲ್ಲೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ. ಮಳೆಯಾಗುವ ಸೂಚನೆಗಳಿದ್ದು, ಗಂಟೆಗೆ 5 ರಿಂದ 10 ಸೆಂ.ಮೀ. ಮಳೆ ಹಾಗೂ 10 ರಿಂದ 14 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಮುನ್ಸೂಚನೆ ನೀಡಿದೆ.

ರೆಡ್ ಅಲರ್ಟ್ ಕಾರಣ?:ಭಾರಿ ಮಳೆಯಿಂದ ಎಲ್ಲ ರಸ್ತೆಗಳು ಜಲಾವೃತಗೊಂಡಿವೆ. ಇದೇ ರೀತಿ ಮಳೆ ಮುಂದುವರಿದರೆ, ಗಾಳಿಗೆ ಮರಗಳು ಬೀಳುವ ಅಪಾಯವಿದೆ. ವಿದ್ಯುತ್ ಕಂಬಗಳಿಗೆ ಹಾನಿ ಆಗಲಿವೆ ಹಾಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಹಲವು ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಬಹುದು.

ಐದು ವಲಯಗಳಲ್ಲಿ ಯಲ್ಲೊ ಅಲರ್ಟ್​:ಹವಾಮಾನ ಇಲಾಖೆಯಿಂದ ಐದು ವಲಯಗಳಲ್ಲಿ ಯಲ್ಲೊ ಅಲರ್ಟ್​ ಘೋಷಣೆ ಮಾಡಲಾಗಿದೆ. ಗುರುವಾರ ಈ ಪ್ರದೇಶಗಳಲ್ಲಿ ಸಾಧಾರಣ ಹಾಗೂ ಭಾರಿ ಮಳೆಯಾಗಲಿದೆ. ಶುಕ್ರವಾರ ಮತ್ತು ಶನಿವಾರ ಕೂಡಾ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಪ್ರತಿ ಗಂಟೆಗೆ 2 ರಿಂದ 3 ಅಥವಾ 5 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ವಿವಿಧೆಡೆ ಉತ್ತಮ ಮಳೆ:ಮಂಗಳವಾರ ನಗರದ ಬಹುತೇಕ ಭಾಗಗಳಲ್ಲಿ ತುಂತುರು ಮಳೆ ಸುರಿದಿದೆ. ಒಂದೆಡೆ ಸಾಧಾರಣ ಹಾಗೂ ಇನ್ನೊಂದೆಡೆ ಧಾರಾಕಾರ ಮಳೆ ಸುರಿದಿದೆ. ಆಸಿಫ್ ನಗರದಲ್ಲಿ 43.5 ಮಿಮೀ, ಟೋಲಿಚೌಕಿಯಲ್ಲಿ 19.8 ಮಿಮೀ, ತೆಲಂಗಾಣ ರಾಜ್ಯ ಯೋಜನಾ ಅಭಿವೃದ್ಧಿ ಸೊಸೈಟಿ (ಟಿಎಸ್‌ಡಿಪಿಎಸ್) ಇತರ ಪ್ರದೇಶಗಳಲ್ಲಿ 10 ಎಂಎಂಗಿಂತ ಕಡಿಮೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿದ್ಯುತ್​ ಅಪಾಯದ ಕುರಿತು ಮುನ್ನೆಚ್ಚರಿಕೆ:ಎಸ್‌ಪಿಡಿಸಿಎಲ್ ಸಿಎಂಡಿ ಗೋಪಾಲ್ ರಾವ್ ಅವರು, ಮಳೆಗಾಲದಲ್ಲಿ ಅಪಘಾತಗಳನ್ನು ತಡೆಗಟ್ಟಲು ಗ್ರಾಹಕರಿಗೆ ಮತ್ತು ರೈತರಿಗೆ ಹಲವು ಸಲಹೆಗಳನ್ನು ನೀಡಿದರು. ಒದ್ದೆಯಾದ ಕೈಗಳಿಂದ ಮನೆಯಲ್ಲಿ ವಿದ್ಯುತ್ ಸಾಧನಗಳು ಮತ್ತು ತಂತಿಗಳನ್ನು ಮುಟ್ಟಬಾರದು. ಚಿಕ್ಕ ಮಕ್ಕಳು ವಿದ್ಯುತ್ ಉಪಕರಣಗಳ ಬಳಿ ಹೋಗದಂತೆ ಎಚ್ಚರಿಕೆ ವಹಿಸಬೇಕು. ಟೆರೇಸ್‌ಗಳ ಮೇಲೆ ಹೋಗದಂತೆ ಗಮನಹರಿಸಬೇಕು. ಆಟವಾಡುವಾಗ ವಿದ್ಯುತ್ ತಂತಿಗಳು ತಾಗುವ ಅಪಾಯವಿದೆ ಎಂದರು.

ಸೆಲ್ ಫೋನ್ ಚಾರ್ಜ್ ಮಾಡುವಾಗ ಮಾತನಾಡಬೇಡಿ. 3 ಪಿನ್ ಪ್ಲಗ್‌ನೊಂದಿಗೆ ಗುಣಮಟ್ಟದ ಚಾರ್ಜರ್‌ಗಳನ್ನು ಬಳಸಬೇಕು. ಕಂಬದಿಂದ ಮನೆಯೊಳಗೆ ಬರುವ ಸೇವಾ ತಂತಿಗಳು ಮೇಲಾವರಣಕ್ಕೆ ತಾಗದಂತೆ ನೋಡಿಕೊಳ್ಳಬೇಕು. ಆಕಸ್ಮಿಕ ವಿದ್ಯುತ್ ಆಘಾತದ ಸಂದರ್ಭದಲ್ಲಿ, ಅವರನ್ನು ರಕ್ಷಿಸುವ ಉತ್ಸಾಹದಲ್ಲಿ ಆಘಾತಕ್ಕೊಳಗಾದ ವ್ಯಕ್ತಿಯನ್ನು ಸ್ಪರ್ಶಿಸಬಾರದು. ವಿದ್ಯುತ್ ಅಪಾಯದಲ್ಲಿ ಸಿಲುಕಿರುವ ವ್ಯಕ್ತಿಯನ್ನುಕಟ್ಟಿಗೆಯ ಕೋಲು ಅಥವಾ ಪ್ಲಾಸ್ಟಿಕ್ ವಸ್ತುಗಳಿಂದ ಬೇರ್ಪಡಿಸಬೇಕು. ಯಾವುದೇ ಸಂದರ್ಭದಲ್ಲೂ ಸ್ವಂತ ರಿಪೇರಿ ಮಾಡಬಾರದು ಎಂದು ಎಸ್‌ಪಿಡಿಸಿಎಲ್ ಸಿಎಂಡಿ ಗೋಪಾಲ್ ರಾವ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಕೊಳಚೆ ನೀರಿನೊಂದಿಗೆ ಮನೆಗೆ ಬಂದ ಹಾವು: ಅದನ್ನು ಹಿಡಿದು ಮಹಾನಗರ ಪಾಲಿಕೆ ಕಚೇರಿಗೆ ಬಿಟ್ಟು ಬಂದ ನಿವಾಸಿ!

ABOUT THE AUTHOR

...view details