ಕರ್ನಾಟಕ

karnataka

By

Published : May 27, 2021, 4:19 PM IST

ETV Bharat / bharat

Cream Fungus: ಬಿಳಿ, ಕಪ್ಪು, ಹಳದಿ ಆಯ್ತು.. ಇದೀಗ ಕ್ರೀಮ್​ ಬಣ್ಣದ ಶಿಲೀಂಧ್ರ ಪತ್ತೆ

ನಾಲ್ಕು ವಾರಗಳ ಹಿಂದೆ ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದ 49 ವರ್ಷದ ಮಹಿಳೆ ಕಿಮೋಥೆರಪಿಗೆ ಒಳಗಾಗಿದ್ದರು. ಈ ಹಿನ್ನೆಲೆ ಆಕೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಕ್ರೀಮ್ ಶಿಲೀಂಧ್ರ ಪತ್ತೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Delhi
Delhi

ನವದೆಹಲಿ: ಬಿಳಿ, ಕಪ್ಪು, ಹಳದಿ ಫಂಗಸ್​ ಆಯ್ತು. ಇದೀಗ ದೆಹಲಿಯ ಗಂಗರಾಮ್ ಆಸ್ಪತ್ರೆಯಲ್ಲಿ ಕ್ರೀಮ್(Cream Fungus) ಬಣ್ಣದ ಶಿಲೀಂಧ್ರ ಪತ್ತೆಯಾಗಿದೆ. ಸಣ್ಣ ಕರುಳು, ದೊಡ್ಡ ಕರುಳು ಮತ್ತು ಅನ್ನನಾಳದಲ್ಲಿ ಈ ಸೋಂಕು ಕಂಡುಬಂದಿದೆ.

ಇನ್ಸ್​ಟಿಟ್ಯೂಟ್ ಆಫ್ ಲಿವರ್ ಗ್ರಾಸ್ಟ್ರೋ ಎಂಟರಾಲಜಿ ಮತ್ತು ಪ್ಯಾಂಕ್ರಿಯಾಟಿಕೊ ಬಿಲಿಯರಿ ಸೈನ್ಸ್​ನ ಅಧ್ಯಕ್ಷ ಡಾ.ಅನಿಲ್ ಅರೋರಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೆಚ್ಚಿನ ಸ್ಟಿರಾಯ್ಡ್​​ಗಳ ಬಳಕೆಯಿಂದಾಗಿ ಈ ಸೋಂಕು ತಗುಲಿದೆ. ನಾಲ್ಕು ವಾರಗಳ ಹಿಂದೆ ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದ 49 ವರ್ಷದ ಮಹಿಳೆ ಕಿಮೋಥೆರಪಿಗೆ ಒಳಗಾಗಿದ್ದರು. ಈ ಹಿನ್ನೆಲೆ ಆಕೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಸೋಂಕು ಪತ್ತೆಯಾಗಿದೆ ಎಂದರು.

ವಾಂತಿ ಮತ್ತು ಅತಿಸಾರದಿಂದ ಮೇ 13 ರಂದು ಆಕೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ಕರೆತರಲಾಯಿತು. ಸಿಟಿ ಸ್ಕ್ಯಾನ್ ಮಾಡಿದಾಗ ಅವರಲ್ಲಿ ಕ್ರೀಮ್ ಫಂಗಸ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:COVID 19 Vaccination: ಅಚ್ಚರಿಯಾದ್ರೂ ನಿಜ.. ಲಸಿಕೆ ಅಭಿಯಾನದಲ್ಲಿ ಈ ರಾಜ್ಯವೇ ನಂಬರ್ 1!

ವೈದ್ಯಕೀಯ ತಜ್ಞರ ನೇತೃತ್ವದಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅರೋರಾ ತಿಳಿಸಿದ್ದಾರೆ.

ABOUT THE AUTHOR

...view details