ಚಿತ್ತೂರು(ಆಂಧ್ರಪ್ರದೇಶ):ಅಂಧ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಪ್ರಕರಣ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ. ಸಂತ್ರಸ್ತೆಯ ತಾಯಿ ಈ ಕುರಿತು ದಿಶಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ವಿವಾಹಿತ ವ್ಯಕ್ತಿ ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಸಂತ್ರಸ್ತೆಯ ಕುಟುಂಬ ಚಿತ್ತೂರಿನಲ್ಲಿ ವಾಸವಾಗಿದ್ದು, ಯುವತಿಯ ತಂದೆ ಈ ಹಿಂದೆ ತೀರಿಕೊಂಡಿದ್ದರು. ಸದ್ಯ ತಾಯಿ ಜೊತೆ ಯುವತಿ ಉಳಿದುಕೊಂಡಿದ್ದಾಳೆ. ಇದೇ ಪ್ರದೇಶದಲ್ಲಿ ವಾಸವಾಗಿರುವ ನಿವೃತ್ತ ಪೊಲೀಸ್ ಕಾನ್ಸ್ಟೇಬಲ್ ಪುತ್ರ ಜಯಚಂದ್ರ ಈ ದುಷ್ಕೃತ್ಯವೆಸಗಿದ್ದಾನೆ. ವಿಶ್ವ ಮಹಿಳಾ ದಿನಾಚರಣೆಯಂದು ಆಕೆಗೆ ಸುಳ್ಳು ಹೇಳಿ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.