ಕರ್ನಾಟಕ

karnataka

ETV Bharat / bharat

ಧಾರಾಕಾರ ಮಳೆಗೆ ಪತಿ - ಪತ್ನಿ ಸೇರಿ ಮೂವರು ಬಲಿ..ಮಾನವ ನಿರ್ಮಿತ ಪ್ರವಾಹ ಎಂದ ಸಿಎಂ

ಜಾರ್ಖಂಡ್​ನಲ್ಲಿ ಮಳೆಯಾಗಿದ್ದರಿಂದ ಡ್ಯಾಂಗಳ ಗೇಟ್ ತೆರೆಯಲಾಗಿದ್ದು, ಇದರಿಂದ ರಾಜ್ಯದಲ್ಲಿ ಪ್ರವಾಹ ಉಂಟಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಯಾವುದೇ ಸೂಚನೆ ನೀಡದ ಡ್ಯಾಂನಿಂದ ನೀರು ಬಿಡಲಾಗಿದ್ದು, ಇದರಿಂದಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದಿದ್ದಾರೆ.

rain-wreaks-havoc-in-giridih-district-of-jharkhand-three-dead
ಧಾರಾಕಾರ ಮಳೆಗೆ ಪತಿ-ಪತ್ನಿ ಸೇರಿ ಮೂವರು ಬಲಿ.

By

Published : Oct 2, 2021, 7:28 AM IST

ರಾಂಚಿ (ಜಾರ್ಖಂಡ್​)​: ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿನ ಪಿರ್ತಾಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಡುವಾಡಿಹ್ ಗ್ರಾಮದಲ್ಲಿ ಮನೆ ಕುಸಿದ ಪರಿಣಾಮ ಪತಿ - ಪತ್ನಿ ಮೃತಪಟ್ಟಿದ್ದಾರೆ. ಜೊತೆಗೆ ನದಿಯ ಪ್ರವಾಹದಲ್ಲಿ ಓರ್ವ ಕೊಚ್ಚಿಹೋಗಿದ್ದಾನೆ ಎಂದು ತಿಳಿದುಬಂದಿದೆ.

ನಿರಂತರ ಮಳೆ ಸುರಿದ ಪರಿಣಾಮ ಮನೆ ಕುಸಿದು ಬಿದ್ದಿದೆ ಈ ವೇಳೆ ಮನೆಯಲ್ಲಿ ಮಲಗಿದ್ದ ರುಪ್ಲಾಲ್ ಮಾಂಜಿ (65) ಶನಿಮುನಿ ದೇವಿ (62) ಎಂಬ ದಂಪತಿ ಅಸುನೀಗಿದ್ದಾರೆ. ಮನೆಯಲ್ಲಿದ್ದ ಇತರ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತ ಸರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಓರ್ವ ಕೊಚ್ಚಿಹೋಗಿದ್ದಾನೆ. ಕೊಚ್ಚಿಹೋದನವನನ್ನು ಪುರಿಯಾ ಮಹತೋ ಎಂದು ಗುರುತಿಸಲಾಗಿದ್ದು, ಆತನ ಮೃತದೇಹ ಪತ್ತೆಯಾಗಿದೆ. ಮಳೆಯಿಂದಾಗಿ ಹಲವೆಡೆ ಕಚ್ಚಾ ಮನೆಗಳು ಕುಸಿದಿದೆ. ಅಲ್ಲದೇ ರಸ್ತೆಗಳು ಹಾಗೂ ಸೇತುವೆಗಳು ಮುಳಗಿದ್ದು, ಪ್ರವಾಹದಿಂದ ಕಂಗೆಟ್ಟಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.

ಕೋಲ್ಕತ್ತಾದಲ್ಲೂ ಪ್ರವಾಹದಬ್ಬರ

ಇನ್ನೊಂದೆಡೆ ಕೋಲ್ಕತ್ತಾ ಭಾಗದಲ್ಲಿಯೂ ಮಳೆಯಾರ್ಭಟ ಜೋರಾಗಿದೆ. 9 ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಪ್ರವಾಹದಿಂದಾಗಿ ಕನಿಷ್ಠ ಇಬ್ಬರು ಸಾವಿಗೀಡವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾರ್ಖಂಡ್​ನಲ್ಲಿ ಮಳೆಯಾಗಿದ್ದರಿಂದ ಡ್ಯಾಂಗಳ ಗೇಟ್ ತೆರೆಯಲಾಗಿದ್ದು, ಇದರಿಂದ ರಾಜ್ಯದಲ್ಲಿ ಪ್ರವಾಹ ಉಂಟಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಮಾನವ ನಿರ್ಮಿತ ಪ್ರವಾಹ ಎಂದು ಆಕ್ರೋಶ ಹೊರಹಾಕಿದ್ದಾರೆ. ರಾಜ್ಯಕ್ಕೆ ಯಾವುದೇ ಸೂಚನೆ ನೀಡದ ಡ್ಯಾಂನಿಂದ ನೀರು ಬಿಡಲಾಗಿದ್ದು, ಇದರಿಂದಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದಿದ್ದಾರೆ.

ಇದನ್ನೂ ಓದಿ:ಛತ್ತೀಸ್​​ಗಢ ಕಾಂಗ್ರೆಸ್​ ಭಿನ್ನಮತ: ಮತ್ತಷ್ಟು ಶಾಸಕರು ದೆಹಲಿಗೆ ದೌಡು

ABOUT THE AUTHOR

...view details