ಕರ್ನಾಟಕ

karnataka

ETV Bharat / bharat

ರೈತರಿಗೆ ಬೆಂಬಲ ಸೂಚಿಸಲು ಫೆ.12, 13ರಂದು ರಾಜಸ್ಥಾನಕ್ಕೆ ರಾಹುಲ್​ ಭೇಟಿ - ರೈತರಿಗೆ ಬೆಂಬಲ ಸೂಚಿಸಲು ಫೆ.12, 13ರಂದು ರಾಜಸ್ಥಾನಕ್ಕೆ ರಾಹುಲ್​ ಭೇಟಿ

ರೈತರಿಗೆ ಬೆಂಬಲ ಸೂಚಿಸಲು ಫೆ.12 ಮತ್ತು 13ರಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

Rahul Gandhi to visit Rajasthan
ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ

By

Published : Feb 6, 2021, 8:35 PM IST

ರಾಜಸ್ಥಾನ:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಲು ಫೆ.12 ಮತ್ತು 13ರಂದುಕಾಂಗ್ರೆಸ್​ ನಾಯಕರಾಹುಲ್ ಗಾಂಧಿ ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ರಾಜಸ್ಥಾನಕ್ಕೆ ಎರಡು ದಿನ ಪ್ರವಾಸ ಕೈಗೊಂಡಿರುವ ರಾಹುಲ್​,​ ಕೃಷಿ ಕಾನೂನುಗಳನ್ನು ಹಿಂಪಡೆಯಲು ಆಗ್ರಹಿಸಲಿದ್ದಾರೆ. ಆದರೆ, ಯಾವ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂಬುದರ ಕುರಿತು ನಿರ್ಧರಿಸಲಾಗಿಲ್ಲ. ಈ ಕುರಿತು ಶೀಘ್ರ ಪ್ರಕಟಣೆ ಹೊರಡಿಸಲಾಗುತ್ತದೆ. ಹನುಮಾನ್‌ಗಢ, ಗಂಗನಗರ ಮತ್ತು ನಾಗೌರ್​ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕೃಷಿ ಕಾಯ್ದೆಗಳ ಮತ್ತು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಮಾತನಾಡಲಿದ್ದಾರೆ.

ABOUT THE AUTHOR

...view details