ಕರ್ನಾಟಕ

karnataka

ETV Bharat / bharat

"ಕೊರೊನಾ ಅಲ್ಲ, ಮೋದಿ ನಿರ್ಲಕ್ಷ್ಯ ಸೋಂಕಿತರ ಸಾವಿಗೆ ಕಾರಣ": ಕೇಂದ್ರದ ವಿರುದ್ಧ ರಾಹುಲ್​ ಕಿಡಿ

ಮೋದಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ದೇಶದಲ್ಲಿ ರೋಗಿಗಳಿಗೆ ಅನಿವಾರ್ಯವಾಗಿ ಬೇಕಾದ ಆಮ್ಲಜನಕದ ಸಿಲಿಂಡರ್​ಗಳು ಮತ್ತು ಐಸಿಯು ಬೆಡ್ ಕೊರತೆಯುಂಟಾಗಿವೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.

rahul gandhi
ಕೇಂದ್ರದ ವಿರುದ್ಧ ರಾಹುಲ್​ ವಾಗ್ದಾಳಿ

By

Published : Apr 23, 2021, 1:50 PM IST

ನವದೆಹಲಿ: ಕೊರೊನಾ ವೈರಸ್​ನಿಂದಾಗಿ ಮನುಷ್ಯನ ದೇಹದಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಆದರೆ ಮೋದಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ದೇಶದಲ್ಲಿ ರೋಗಿಗಳಿಗೆ ಅನಿವಾರ್ಯವಾಗಿ ಬೇಕಾದ ಆಮ್ಲಜನಕದ ಸಿಲಿಂಡರ್​ಗಳು ಮತ್ತು ಐಸಿಯು ಬೆಡ್ ಕೊರತೆಯುಂಟಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಕಿಡಿಕಾರಿದ್ದಾರೆ.

ಮೋದಿ ನಿರ್ಲ್ಯಕ್ಷವೇ ಸಾವಿರಾರು ಮಂದಿಯ ನಿತ್ಯ ಸಾವಿಗೆ ಕಾರಣ ಎಂದು ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇಂದ್ರದ ವಿರುದ್ಧ ರಾಹುಲ್​ ಕಿಡಿ

ಈಗಾಗಲೇ ದೇಶದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕಳೆದ 24 ಗಂಟೆಗಳಲ್ಲಿ 3,32,730 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಪಾಸಿಟಿವ್​ ಪ್ರಕರಣಗಳ ಸಂಖ್ಯೆ 1,62,63,695ಕ್ಕೆ ಏರಿದೆ. 2,263 ಮಂದಿ ಒಂದೇ ದಿನದಲ್ಲಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 1,86,920ಕ್ಕೆ ಏರಿದೆ.

ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 24,28,616 ಮತ್ತು ಡಿಸ್ಚಾರ್ಜ್​ ಆದವರ ಒಟ್ಟು ಸಂಖ್ಯೆ 1,36,48,159ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 31,47,782 ಮಂದಿಗೆ ವ್ಯಾಕ್ಸಿನ್​ ನೀಡಲಾಗಿದೆ. ಲಸಿಕೆಗಳನ್ನು ದೇಶದಲ್ಲಿ ನೀಡಲಾಗಿದ್ದು, ನಂತರ ಒಟ್ಟು ವ್ಯಾಕ್ಸಿನೇಷನ್ ಸಂಖ್ಯೆ 13,54,78,420ಕ್ಕೆ ಏರಿದೆ.

ABOUT THE AUTHOR

...view details