ಕರ್ನಾಟಕ

karnataka

ETV Bharat / bharat

ಮತ್ತೊಮ್ಮೆ ‘ನಾವಿಬ್ಬರು ನಮಗಿಬ್ಬರು’ ಎಂದ ‘ರಾಗಾ’..ಕ್ರಿಕೆಟ್​ ಮೈದಾನಕ್ಕೆ ಮೋದಿ ಹೆಸರಿಟ್ಟಿದ್ದಕ್ಕೆ ಕಿಡಿ - ರಾಹುಲ್

ಅಹಮದಾಬಾದ್​​ನ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನಕ್ಕೆ ಪ್ರಧಾನಿ ಮೋದಿ ಹೆಸರಿಟ್ಟಿರುವುದಕ್ಕೆ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಅಲ್ಲಿಯೂ ಅಂಬಾನಿ - ಅದಾನಿ ಹೆಸರಿರುವುದನ್ನ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

Rahul Gandhi
ರಾಹುಲ್ ಗಾಂಧಿ

By

Published : Feb 26, 2021, 4:36 PM IST

ನವದೆಹಲಿ: ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮತ್ತೊಮ್ಮೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಸಾರ್ವಜನಿಕ ರಂಗದ ಉದ್ಯಮಗಳ ಖಾಸಗಿಕರಣ ಮಾಡುತ್ತಿರುವ ಕೇಂದ್ರದ ನೀತಿಯ ವಿರುದ್ಧ ಹರಿಹಾಯ್ದಿದ್ದಾರೆ.

ಈ ಕುರಿತು ಟ್ವಿಟರ್​​​ನಲ್ಲಿ ಬರೆದುಕೊಂಡಿರುವ ರಾಹುಲ್, ಮತ್ತೊಮ್ಮೆ ‘ನಾವಿಬ್ಬರು ನಮಗಿಬ್ಬರು’ ಎಂದು ಟೀಕಿಸಿದ್ದಾರೆ. ‘ಸಿರ್ಫ್​​​​ ಹಮಾರೆ ದೋ ಕಾ ಕಲ್ಯಾಣ್’​ ಎಂದು ಟೀಕಿಸಿದ್ದಾರೆ.

ಇದಲ್ಲದೇ ಅಹಮದಾಬಾದ್ ಕ್ರಿಕೆಟ್​ ಮೈದಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಎಂದು ಮರುನಾಮಕರಣ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ರಾಹುಲ್, ಸತ್ಯ ಹೇಗೆ ಬಹಿರಂಗವಾಗುತ್ತದೆ, ನರೇಂದ್ರ ಮೋದಿ ಕ್ರೀಡಾಂಗಣ, ಅದಾನಿ ಎಂಡ್​​​ ​- ಅಂಬಾನಿ ಎಂಡ್​​​ ಅದು ಸಹ ಜಯ್​ ಶಾ ಅಧ್ಯಕ್ಷತೆಯಲ್ಲಿ ಎಂದು ಟ್ವೀಟ್ ಮಾಡಿದ್ದಾರೆ.

ಇದಾದ ಬಳಿಕ ಇನ್ನೊಂದು ಟ್ವೀಟ್​​​ನಲ್ಲಿ, ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯದ ಅಗತ್ಯತೆ ಇದೆ. ಸಚಿವಾಲಯದೊಳಗಿನ ಒಂದು ವಿಭಾಗ ಮಾತ್ರವಲ್ಲ ಎಂದಿದ್ದು, ಇಲ್ಲಿಯೂ ‘ನಾವಿಬ್ಬರೂ ನಮಗಿಬ್ಬರು’ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ:"ಜನರ ಆದೇಶವು ಬೇಜವಾಬ್ದಾರಿಯಿಂದ ವರ್ತಿಸುವ ಪರವಾನಗಿಯಲ್ಲ": ಬಿಜೆಪಿ ವಿರುದ್ಧ 'ಸೇನಾ' ಸವಾರಿ

ABOUT THE AUTHOR

...view details