ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಮಧ್ಯೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ "ಸ್ಪೀಕ್ಅಪ್ ಫಾರ್ ಫಾರ್ಮರ್ಸ್" ಎಂಬ ಅಭಿಯಾನಕ್ಕೆ ಸೇರುವಂತೆ ಮನವಿ ಮಾಡಿದ್ದಾರೆ.
"ಮೋದಿ ಸರ್ಕಾರ ಕರಾಳ ಕಾನೂನುಗಳನ್ನು ತಂದು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇದೀಗ ಲಾಠಿಚಾರ್ಜ್, ಬಲಪ್ರಯೋಗ ಮಾಡುವ ಮೂಲಕ ಹಿಂಸಿಸುತ್ತಿದೆ. ಆದರೆ, ರೈತರು ಧ್ವನಿ ಎತ್ತಿದಾಗ ಅದು ದೇಶಾದ್ಯಂತ ಪರಿಣಾಮ ಬೀರುತ್ತದೆ ಎಂಬುದನ್ನು ಅವರು ಮರೆತಿದ್ದಾರೆ. #ಸ್ಪೀಕ್ಅಪ್ಫಾರ್ಮರ್ಸ್ ಅಭಿಯಾನದ ಮೂಲಕ ನಮ್ಮ ಶೋಷಣೆಯ ವಿರುದ್ಧ ಧ್ವನಿಯೆತ್ತಿ. ನಮ್ಮೊಂದಿಗೆ ಸೇರಿ ರೈತ ಸಹೋದರರೇ" ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಇನ್ನು ಇದೇ ವಿಷಯದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, "ಹೊಸ ಕೃಷಿ ಕಾನೂನುಗಳಲ್ಲಿ ರೈತರ ಹಿತಾಸಕ್ತಿಗಳನ್ನು ಕಡೆಗಣಿಸಲಾಗಿದೆ. ಕಾನೂನಿನ ಹೆಸರು, ರೈತರಿಗೆ ಕಾನೂನು. ಆದರೆ, ಕೋಟ್ಯಾಧಿಪತಿ ಸ್ನೇಹಿತರಿಗೆ ಎಲ್ಲಾ ಪ್ರಯೋಜನ.