ಕರ್ನಾಟಕ

karnataka

ETV Bharat / bharat

Rahul Gandhi: ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿಗೆ ರಾಹುಲ್​ ಗಾಂಧಿ ನಾಮನಿರ್ದೇಶನ - defamation case

Parliamentary Standing Committee: ಇತ್ತೀಚೆಗೆ ಲೋಕಸಭಾ ಸದಸ್ಯತ್ವವನ್ನು ಮರು ಪಡೆದಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ಲೋಕಸಭೆಯ ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿಗೆ ನಾಮನಿರ್ದೇಶನ ಮಾಡಲಾಗಿದೆ.

Rahul Gandhi nominated to parliamentary standing committee on defence
ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿಗೆ ರಾಹುಲ್​ ಗಾಂಧಿ ನಾಮನಿರ್ದೇಶನ

By

Published : Aug 16, 2023, 10:06 PM IST

ನವದೆಹಲಿ:ಲೋಕಸಭೆಯ ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಬುಧವಾರ ನಾಮನಿರ್ದೇಶನ ಮಾಡಲಾಗಿದೆ. ಮತ್ತೊಬ್ಬ ಕಾಂಗ್ರೆಸ್ ಸಂಸದ ಅಮರ್ ಸಿಂಗ್ ಅವರನ್ನೂ ಇದೇ ಸಮಿತಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ಲೋಕಸಭೆಯ ಬುಲೆಟಿನ್ ತಿಳಿಸಿದೆ.

ಹೊಸದಾಗಿ ಚುನಾಯಿತರಾದ ಲೋಕಸಭೆಯ ಆಮ್ ಆದ್ಮಿ ಪಕ್ಷದ ಸಂಸದ ಸುಶೀಲ್ ಕುಮಾರ್ ರಿಂಕು ಅವರನ್ನು ಕೃಷಿ, ಪಶುಸಂಗೋಪನೆ ಮತ್ತು ಆಹಾರ ಸಂಸ್ಕರಣೆ ಸಮಿತಿಗೆ ನಾಮನಿರ್ದೇಶನ ಮಾಡಲಾಗಿದೆ. ಇತ್ತೀಚೆಗೆ ಜಲಂಧರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಯ್ಕೆಯಾಗಿರುವ ರಿಂಕು ಸಂಸತ್ತಿನ ಕೆಳಮನೆಯ ಏಕೈಕ ಆಪ್​ ಸದಸ್ಯರಾಗಿದ್ದಾರೆ.

ಅಲ್ಲದೇ, ಎನ್‌ಸಿಪಿಯ ಫೈಜಲ್ ಪಿಪಿ ಮೊಹಮ್ಮದ್ ಅವರನ್ನು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆಯ ಸಮಿತಿಗೆ ನಾಮನಿರ್ದೇಶನ ಮಾಡಲಾಗಿದೆ. ಲಕ್ಷದ್ವೀಪ ಕ್ಷೇತ್ರದ ಸಂಸದರಾದ ಫೈಜಲ್ ಅವರಿಗೆ ಕೊಲೆ ಯತ್ನ ಪ್ರಕರಣದಲ್ಲಿ ಸೆಷನ್ಸ್​ ಕೋರ್ಟ್​ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಕೇರಳ ಹೈಕೋರ್ಟ್​ ಈ ಆದೇಶಕ್ಕೆ ತಡೆ ನೀಡಿತ್ತು. ಇದರಿಂದ ಮಾರ್ಚ್​ನಲ್ಲಿ ಅವರ ಸದಸ್ಯತ್ವವನ್ನು ಮರುಸ್ಥಾಪಿಸಲಾಗಿತ್ತು.

2019ರ ಮೋದಿ ಉಪನಾಮ ಕುರಿತ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸಂಸತ್ತಿನಿಂದ ಅನರ್ಹಗೊಳ್ಳುವ ಮೊದಲೂ ರಾಹುಲ್​ ಗಾಂಧಿ ರಕ್ಷಣಾ ಸಂಸದೀಯ ಸಮಿತಿಯ ಸದಸ್ಯರಾಗಿದ್ದರು. ಮಾರ್ಚ್​ 23ರಂದು ಗುಜರಾತ್ ನ್ಯಾಯಾಲಯವು ರಾಹುಲ್​ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದರ ಮರು ದಿನ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ರಾಹುಲ್​ ಗಾಂಧಿ ಶಿಕ್ಷೆಗೆ​ ತಾತ್ಕಾಲಿಕ ತಡೆ ನೀಡಿದ್ದ ಕಾರಣ ಆಗಸ್ಟ್ 7ರಂದು ಅವರ ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದ್ದು, ಇದರ ಬೆನ್ನಲ್ಲೇ ಸಮಿತಿಗೆ ನಾಮನಿರ್ದೇಶನ ಮಾಡಲಾಗಿದೆ.

ರಾಹುಲ್​ ಖುದ್ದು ಹಾಜರಿಗೆ ಜಾರ್ಖಂಡ್​ ಹೈಕೋರ್ಟ್​ ವಿನಾಯಿತಿ: ಮತ್ತೊಂದೆಡೆ, ಮೋದಿ ಉಪನಾಮ ಕುರಿತ ರಾಹುಲ್​ ಗಾಂಧಿ ಅವರಿಗೆ ಬುಧವಾರ ಜಾರ್ಖಂಡ್​ ಹೈಕೋರ್ಟ್​ ರಿಲೀಫ್​ ನೀಡಿದೆ. ರಾಂಚಿಯ ವಿಶೇಷ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವುದಕ್ಕೆ ಹೈಕೋರ್ಟ್​ ವಿನಾಯಿತಿ ನೀಡಿದೆ. ವಕೀಲ ಪ್ರದೀಪ್​ ಮೋದಿ ಎಂಬವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಖುದ್ದು ಹಾಜರಿಗೆ ಕೆಳ ಹಂತದ ನ್ಯಾಯಾಲಯ ಸೂಚಿಸಿತ್ತು. ಹೀಗಾಗಿ ರಾಹುಲ್​ ಪರ ವಕೀಲರು ಖುದ್ದು ಹಾಜರಿಗೆ ವಿನಾಯಿತಿ ಕೋರಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ರಾಹುಲ್​ ಪರವಾಗಿ ಕೆಳ ಹಂತದ ಕೋರ್ಟ್​ನಲ್ಲಿ ವಕೀಲರಿಗೇ ಹಾಜರಾಗಲು ಅನುಮತಿ ನೀಡಿತು.

ಇದನ್ನೂ ಓದಿ:Lok Sabha Elections: ದೆಹಲಿಯ ಏಳೂ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧೆ; ಆಮ್​ ಆದ್ಮಿ ಪಾರ್ಟಿ ಹೇಳಿದ್ದೇನು?

ABOUT THE AUTHOR

...view details