ನಾಗ್ಪುರ(ಮಹಾರಾಷ್ಟ್ರ):ದೇಹವನ್ನು ಹುರಿಗಟ್ಟಲು ಪುಶ್ಅಪ್ ಮಾಡುತ್ತಾರೆ. ಆದರೆ, ಇಲ್ಲೊಬ್ಬ ದಾಖಲೆಗಾಗಿ ಪುಶ್ಅಪ್ ಮಾಡಿದ್ದಾನೆ. ಅದೂ ಒಂದು ಗಂಟೆಯಲ್ಲಿ ಬರೋಬ್ಬರಿ 3,321 ಬಾರಿ ದಂಡ ಹೊಡೆಯುವ ಮೂಲದ ವಿಶ್ವ ದಾಖಲೆ ನಿರ್ಮಿಸಿದ್ದಾನೆ.
ಈ ಸಾಧಕನ ಹೆಸರು ಕಾರ್ತಿಕ್ ಜೈಸ್ವಾಲ್. ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ 21 ವರ್ಷದ ಈತ ಸಣ್ಣ ವಯಸ್ಸಿನಲ್ಲೇ ವಿಶ್ವವೇ ಕಣ್ಣರಳಿಸುವ ಸಾಧನೆ ಮಾಡಿ ತೋರಿಸಿದ್ದಾನೆ. 1 ಗಂಟೆಯಲ್ಲಿ ಅತಿ ಹೆಚ್ಚು ದಂಡ ಹೊಡೆಯುವ ಮೂಲಕ ಗಿನ್ನಿಸ್ ದಾಖಲೆಯನ್ನು ಮುರಿದಿದ್ದಾರೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಆಟಗಾರ ಡೇನಿಯಲ್ ಸ್ಕಾಲಿ ಒಂದು ತಾಸಿನಲ್ಲಿ 3054 ಬಾರಿ ಪುಶ್ಅಪ್ ಹೊಡೆದಿದ್ದರು. ಇದೀಗ ಈ ವಿಶ್ವದಾಖಲೆ ಕಾರ್ತಿಕ್ ಜೈಸ್ವಾಲ್ ಹೆಸರಿಗೆ ಸೇರಿದೆ.
ಗಂಟೆಯಲ್ಲಿ 3,321 ಸಲ ದಂಡ ಹೊಡೆದು ವಿಶ್ವದಾಖಲೆ ನಿರ್ಮಿಸಿದ ಮಹಾರಾಷ್ಟ್ರದ ಯುವಕ ಡೇನಿಯಲ್ ಸ್ಕಾಲಿ ಕೂಡ ಇದೇ ವರ್ಷವೇ ದಂಡ ಹೊಡೆಯುವುದರಲ್ಲಿ ವಿಶ್ವದಾಖಲೆ ನಿರ್ಮಿಸಿದ್ದರು. ಕಾರ್ತಿಕ ಜೈಸ್ವಾಲ್ ಕೆಲವೇ ತಿಂಗಳುಗಳ ಅಂತರದಲ್ಲಿ ಈ ದಾಖಲೆಯನ್ನು ಅಳಿಸಿ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.
ಐದು ವರ್ಷಗಳ ಸತತ ಅಭ್ಯಾಸ:ಕಾರ್ತಿಕ್ ಜೈಸ್ವಾಲ್ ಎಂಎಂಎ ಫೈಟರ್ ಇಂಡಿಯಾ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ಹೊಂದಿರುವ ಫಿಟ್ನೆಸ್ ಆಟಗಾರ. 1 ಗಂಟೆಯಲ್ಲಿ ಹೆಚ್ಚು ಪುಶ್ಅಪ್ ಮಾಡಿದ ದಾಖಲೆಯನ್ನು ಸೃಷ್ಟಿಸಬೇಕು ಎಂದು ಕಾರ್ತಿಕ್ ಕಳೆದ 5 ವರ್ಷಗಳಿಂದ ದಿನಕ್ಕೆ 6 ಗಂಟೆಗಳಿಗಿಂತ ಹೆಚ್ಚು ಕಾಲ ಪುಶ್ಅಪ್ ಅಭ್ಯಾಸ ಮಾಡುತ್ತಿದ್ದಾರೆ.
ಪಣ ತೊಟ್ಟಿದ್ದ ಕಾರ್ತಿಕ್:ಆಸ್ಟ್ರೇಲಿಯಾದ ಡೇನಿಯಲ್ ಸ್ಕಾಲಿ ಪುಶ್ಅಪ್ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಬಳಿಕ ಅವರ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ ಕಾರ್ತಿಕ್ ದಾಖಲೆಯನ್ನು ಅಳಿಸಲೇಬೇಕು ಎಂದು 5 ವರ್ಷಗಳಿಂದ ಕಠಿಣ ಅಭ್ಯಾಸ ನಡೆಸಿದ್ದರು.
ಅಲ್ಲದೇ, ಕಳೆದ 2 ವರ್ಷಗಳಿಂದ ಜಿಮ್ನಲ್ಲಿ ವಿಶೇಷ ತರಬೇತಿ ಪಡೆಯುತ್ತಿದ್ದಾರೆ. ಇದರ ಜೊತೆಗೆ 6 ಗಂಟೆಗಳ ನಿರಂತರ ಅಭ್ಯಾಸ ಅವರ ದೈನಂದಿನ ಜೀವನದ ಭಾಗವಾಗಿತ್ತು. ದಂಡ ಹೊಡೆಯುವ ಜೊತೆಗೆ ಒಂದು ಗಂಟೆ ಧ್ಯಾನವನ್ನೂ ಮಾಡುತ್ತಾರೆ. ಇದು ಫಿಟ್ನೆಸ್ ಕಾಪಾಡಿಕೊಳ್ಳಲು ನೆರವಾಯಿತು ಎಂಬುದು ಕಾರ್ತಿಕ್ರ ಮಾತಾಗಿದೆ. ಒಂದು ನಿಮಿಷದಲ್ಲಿ ಅತಿ ಹೆಚ್ಚು ದಂಡ ಹೊಡೆದ ದಾಖಲೆಯೂ ಕಾರ್ತಿಕ್ ಹೆಸರಲ್ಲಿದೆ.
ಇದನ್ನೂ ಓದಿ:ಶೂಟರ್ ಸಿಪ್ಪಿ ಸಿಧು ಹತ್ಯೆ ಕೇಸ್: 7 ವರ್ಷದ ಬಳಿಕ ಜಡ್ಜ್ ಪುತ್ರಿಯನ್ನು ಬಂಧಿಸಿದ ಸಿಬಿಐ