ಚಂಡೀಗಢ : ಪಂಜಾಬ್‌ನಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಹಲವು ಬದಲಾವಣೆಗಳು ಜಾರಿಯಾಗುತ್ತಿವೆ. ಈ ನಡುವೆ ಪಂಜಾಬ್ ಪೊಲೀಸರು ಮತ್ತೊಂದು ನಿರ್ದೇಶನ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಮೋಡಿಫೈಡ್ ಮೋಟಾರ್‌ಸೈಕಲ್ ಬಳಕೆಯನ್ನು ನಿಷೇಧಿಸಿದೆ. ಅಂದರೆ ಜುಗಾರು ರೆಹ್ಡಿ ಮೋಟಾರ್ ಬೈಕ್‌ಗಳ ಬಳಕೆಯನ್ನು ನಿಷೇಧಿಸಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲೆಗಳ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶ ನೀಡಲಾಗಿದೆ.
ಜುಗಾರು ಮೋಟಾರು ಸೈಕಲ್ ವಾಹನದ ಸಂಖ್ಯೆಯಲ್ಲಿ ಹೆಚ್ಚಳ : ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಜುಗಾರು ಮೋಟರ್ ಸೈಕಲ್ ಸಂಖ್ಯೆ ಹೆಚ್ಚಾಗಿದ್ದು, ಸಾಮಾನ್ಯ ರಸ್ತೆಗಳಲ್ಲಿ ಸರಕುಗಳನ್ನು ಸಾಗಿಸುವುದು ಅಥವಾ ಪ್ರಯಾಣಿಕರನ್ನು ಸಾಗಿಸಲು ಇದು ಬಳಕೆಯಾಗುತ್ತಿದೆ. ಚಾಲಕರ ನಿರ್ಲಕ್ಷ್ಯದ ಚಾಲನೆಯಿಂದ ಜನ ಸಾಮಾನ್ಯರ ಪ್ರಾಣಕ್ಕೆ ಕುತ್ತು ಬಂದರೂ ಚಾಲಕರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗಿದೆ.