ಕರ್ನಾಟಕ

karnataka

ETV Bharat / bharat

ಪಂಜಾಬ್​ ಕಾಂಗ್ರೆಸ್​​ನಲ್ಲಿ ಅಲ್ಲೋಲಕಲ್ಲೋಲ.. ಸಿಧು ರಾಜೀನಾಮೆ ಬೆನ್ನಲ್ಲೇ ಸಚಿವ ಸ್ಥಾನ ತೊರೆದ ರಜಿಯಾ ಸುಲ್ತಾನ್..

ಕಳೆದ ಜುಲೈ ತಿಂಗಳಲ್ಲಿ ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಸಿಧು ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾರೆ. ಪಂಜಾಬ್​ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರ ಮಧ್ಯೆ ಕಾಂಗ್ರೆಸ್​ನಲ್ಲಿ ಈ ಬಿಕ್ಕಟ್ಟು ಉದ್ಭವಗೊಂಡಿದೆ..

Punjab Cabinet Minister Razia
Punjab Cabinet Minister Razia

By

Published : Sep 28, 2021, 7:45 PM IST

ಚಂಡಿಗಢ (ಪಂಜಾಬ್​) :ಪಂಜಾಬ್​ ಕಾಂಗ್ರೆಸ್​​ನಲ್ಲಿ ಆಂತರಿಕ ಸಂಘರ್ಷ ತಾರಕಕ್ಕೇರಿದೆ. ಇದರ ಪರಿಣಾಮ ಪಿಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ ಬೆನ್ನಲ್ಲೇ ರಜಿಯಾ ಸುಲ್ತಾನ್​ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಅಚ್ಚರಿಗೆ ಕಾರಣವಾಗಿದಾರೆ.

ಕಳೆದೆರಡು ದಿನಗಳ ಹಿಂದೆ ಪಂಜಾಬ್​ನಲ್ಲಿ ನೂತನ ಸಚಿವ ಸಂಪುಟ ರಚನೆಗೊಂಡಿದೆ. ರಜಿಯಾ ಸುಲ್ತಾನ್ ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ, ಇದೀಗ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡುತ್ತಿದ್ದಂತೆ ತಾವೂ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿದ್ದು ಸಾಹೇಬ್​, ತತ್ವ ಸಿದ್ಧಾಂತಗಳ ವ್ಯಕ್ತಿಯಾಗಿದಾರೆ. ಪಂಜಾಬ್​ ಮತ್ತು ಪಂಜಾಬಿಯತ್​ಗಾಗಿ ಹೋರಾಡುತ್ತಿದ್ದರು ಎಂದು ಹೇಳಿಕೊಂಡಿದಾರೆ.

ಇದನ್ನೂ ಓದಿರಿ:ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ ನೀಡುತ್ತಿದ್ದಂತೆ ಈ ರೀತಿ ಕಾಲೆಳೆದ ಕ್ಯಾ. ಅಮರೀಂದರ್ ಸಿಂಗ್​!

ನವಜೋತ್​ ಸಿಂಗ್ ಸಿಧು ಹಾಗೂ ರಜಿಯಾ ಸುಲ್ತಾನ್​ ರಾಜೀನಾಮೆ ನೀಡುತ್ತಿದ್ದಂತೆ ಪಂಜಾಬ್​ನಲ್ಲಿ ತುರ್ತು ಕ್ಯಾಬಿನೆಟ್​​ ಸಭೆ ನಡೆಯುತ್ತಿರುವುದಾಗಿ ತಿಳಿದು ಬಂದಿದೆ. ಕಳೆದ ಕೆಲ ತಿಂಗಳಿಂದ ಪಂಜಾಬ್​ ಕಾಂಗ್ರೆಸ್​​ನಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ.

ಕಳೆದ ಜುಲೈ ತಿಂಗಳಲ್ಲಿ ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಸಿಧು ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾರೆ. ಪಂಜಾಬ್​ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರ ಮಧ್ಯೆ ಕಾಂಗ್ರೆಸ್​ನಲ್ಲಿ ಈ ಬಿಕ್ಕಟ್ಟು ಉದ್ಭವಗೊಂಡಿದೆ.

ABOUT THE AUTHOR

...view details