ಕರ್ನಾಟಕ

karnataka

ETV Bharat / bharat

600ಕೆಜಿಯ ಸ್ಫೋಟಕ ಬಳಿಸಿ 6 ಸೆಕೆಂಡ್​ನಲ್ಲಿ​​ ಚಾಂದಿನಿ ಚೌಕ್​ ಸೇತುವೆ ಉಡೀಸ್​! - Etv Bharat Kannada

ಟ್ರಾಫಿಕ್​ ಸಮಸ್ಯೆ ಹೆಚ್ಚಾದ ಹಿನ್ನೆಲೆ ಚಾಂದಿನಿ ಚೌಕ್​ ಸೇತುವೆ ನೆಲಸಮಗೊಳಿಸಲು ಜಿಲ್ಲಾಡಳಿತ ಸಿದ್ದತೆ ನಡೆಸಿದ್ದ ಇಂದು ರಾತ್ರಿ ಸೇತುವೆ ಕೆಡವಲಾಗುತ್ತಿರುವುದಾಗಿ ತಿಳಿದು ಬಂದಿದೆ.

600 kg of explosive
ಇಂದು ರಾತ್ರಿ ಚಾಂದಿನಿ ಚೌಕ್​ ಸೇತುವೆ ನೆಲಸಮ

By

Published : Oct 1, 2022, 8:29 PM IST

Updated : Oct 1, 2022, 10:16 PM IST

ಪುಣೆ: ನಗರದ ಚಾಂದಿನಿ ಚೌಕ್​ನಲ್ಲಿರುವ ಹಳೆಯ ಸೇತುವೆಯನ್ನ ಇಂದು ಮಧ್ಯರಾತ್ರಿ ನೆಲಸಮಗೊಳಿಸಲಾಗುತ್ತಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನ ಮಾಡಿಕೊಂಡಿದೆ. ಇಂದು ರಾತ್ರಿ 10 ಗಂಟೆಯಿಂದ ಚಾಂದಿನಿ ಚೌಕ್​ ರಸ್ತೆಯ ಸಂಚಾರ ಸ್ಥಗಿತಗೊಳಿಸಿ, ಮಧ್ಯರಾತ್ರಿ 12 ಗಂಟೆ ಸುಮಾರಿಗೆ 600 ಕೆಜಿಯ ಸ್ಫೋಟಕ ಬಳಸಿ ಕೇವಲ 6 ಸೆಕೆಂಡಿನಲ್ಲಿ ಸೇತುವೆ ಕೆಡವಲಾಗುತ್ತಿದೆ.

ಕೆಲ ವರ್ಷಗಳಿಂದ ಈ ರಸ್ತೆಯಲ್ಲಿ ವಾಹನ ದಟ್ಟನೆ ಹೆಚ್ಚಾಗಿದ್ದು, ಟ್ರಾಫಿಕ್​ ಸಮಸ್ಯೆ ಹೆಚ್ಚಾಗುತ್ತಿದೆ. ಮುಂಬೈನಿಂದ ಸತಾರಾ ಕಡೆಗೆ ಹೋಗುವ ಮತ್ತು ಬರುವ ವಾಹನಗಳ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆ ಈ ಸೇತುವೆ ಮೇಲೆ ದಿನೇ ದಿನೆ ಟ್ರಾಫಿಕ್​ ಹೆಚ್ಚಾಗುತ್ತಿದೆ. ಇನ್ನು ಈ ರಸ್ತೆ ಮಾರ್ಗವಾಗಿ ಚಲಿಸುವವರು ಟ್ರಾಫಿಕ್​ನಲ್ಲಿ​ ಸಿಲುಕಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಇತ್ತೀಚೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಇದೇ ಮಾರ್ಗವಾಗಿ ಚಲಿಸುವಾಗ ಟ್ರಾಫಿಕ್​ನಲ್ಲಿ ಸಿಲುಕಿ ಪರದಾಡುವಂತಾಗಿತ್ತು. ನಿತ್ಯ ಇಲ್ಲಿನ ಟ್ರಾಫಿಕ್​ಗೆ ಸಿಲುಕಿ ಸಾವಿರರು ಜನ ಪರದಾಡುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಈ ಹಿಂದೆಯೇ ಸೇತುವೆ ನೆಲಸಮ ಗೊಳಿಸಲು ಸಿದ್ದತೆ ನಡೆಸಿತ್ತು. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಟ್ರಾಫಿಕ್ ಜಾಮ್ ಸಮಸ್ಯೆ ಆದಷ್ಟು ಬೇಗ ಪರಿಹರಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು.

ಚಾಂದಿನಿ ಚೌಕ್​ ಸೇತುವೆ

ಇನ್ನು ಪುಣೆ-ಮುಂಬೈ ಹೆದ್ದಾರಿ ಸಂಚಾರವನ್ನ ನಾಳೆ ಬೆಳಗ್ಗೆ 10 ಗಂಟೆಯಿಂದ ಮುಚ್ಚಲಾಗುತ್ತಿದ್ದು, ಸತಾರಾದಿಂದ ಸಂಚಾರ ಸ್ಥಗಿತಗೊಳ್ಳಲಿದೆ. ಪುಣೆ - ಮುಂಬೈ ಹೆದ್ದಾರಿಯಿಂದ ಬರುವ ವಾಹನಗಳು ಇನ್ನು ಮುಂದೆ ಪುಣೆ ನಗರದಿಂದ ಖೇಡ್-ಶಿವಪುರ ಟೋಲ್ ಬೂತ್‌ ಮೂಲಕ ಹಾದು ಹೋಗಲಿದ್ದು,ಸತಾರಾ ಕಡೆಯಿಂದ ಬರುವ ವಾಹನಗಳು ತಾಳೆಗಾಂವ್ ದಭಾಡೆಯಿಂದ ನಿರ್ಗಮಿಸುವಂತೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ:ನೋಯ್ಡಾದ ಅವಳಿ ಕಟ್ಟಡಗಳ ಮಾರುಕಟ್ಟೆ ಮೌಲ್ಯ 700 ಕೋಟಿ.. ಧ್ವಂಸದಿಂದ 500 ಕೋಟಿ ನಷ್ಟ

Last Updated : Oct 1, 2022, 10:16 PM IST

ABOUT THE AUTHOR

...view details