ಕರ್ನಾಟಕ

karnataka

ETV Bharat / bharat

ಪಾಗಲ್​ ಪ್ರೇಮಿಯ ಹುಚ್ಚಾಟ.. ಯುವತಿ ಕುತ್ತಿಗೆಗೆ ಇರಿದು ಕೊಂದ ಲವ್ವರ್!! - NELLLORE DISTRICT

ಕಾರ್ತಿಕ್ ತಕ್ಷಣವೇ ತಂದೆ-ತಾಯಿ ಹಾಗೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾನೆ. ಸ್ಥಳಕ್ಕೆ ದೌಡಾಯಿಸಿದ ಎಸ್ಐ ಆದಿಲಕ್ಷ್ಮಿ, ಮುಚ್ಚಿದ್ದ ರೂಂ ಓಪನ್ ಮಾಡಿದ್ರು. ಈ ವೇಳೆ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ವೆಂಕಟೇಶ್​ ಕಿಟಕಿಯಿಂದ ಆಚೆ ಸೀರೆಯಲ್ಲಿ ನೇಣುಬಿಗಿದುಕೊಂಡಿದ್ದ..

ಪಾಗಲ್​ ಪ್ರೇಮಿಯ ಹುಚ್ಚಾಟ
ಪಾಗಲ್​ ಪ್ರೇಮಿಯ ಹುಚ್ಚಾಟ

By

Published : Jul 2, 2021, 8:20 AM IST

ನೆಲ್ಲೂರು(ಆಂಧ್ರಪ್ರದೇಶ) :ಯುವತಿ ಪ್ರೀತಿ ನಿರಾಕರಿಸಿದ್ದಕ್ಕಾಗಿ ಪಾಗಲ್ ಪ್ರೇಮಿಯೊಬ್ಬ ಚಾಕುವಿನಿಂದ ಕುತ್ತಿಗೆಗೆ ಇರಿದು ಹತ್ಯೆಗೈದಿರುವ ಘಟನೆ ಜಿಲ್ಲೆಯ ಗುಡೂರು ಪ್ರದೇಶದಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ

ಶಿಕ್ಷಕರಾಗಿದ್ದ ಪಿ.ಸುಧಾಕರ್ ಹಾಗೂ ಸರಿತಾ ಎಂಬ ದಂಪತಿ ಮಗಳು ತೇಜಸ್ವಿನಿ ಎಂಬುವರು ಎಂಜಿನಿಯರಿಂಗ್ ಓದುತ್ತಿದ್ದರು. ಸುಧಾಕರ್ ಸಹೋದ್ಯೋಗಿ ಚೆಂಚು ಕೃಷ್ಣಯ್ಯ ಎಂಬುವರ ಅವರ ಪುತ್ರ ವೆಂಕಟೇಶ್ ಎಂಬುವರ ಜತೆಗೆ ತೇಜಸ್ವಿನಿ ಪರಿಚಯವಾಗಿತ್ತು. ವೆಂಕಟೇಶ್​ ಅವರು ತೇಜಸ್ವಿನಿ ಅವರಿಗೆ ಪ್ರೇಮನಿವೇದನೆ ಮಾಡಿಕೊಂಡಿದ್ದರು. ಯುವತಿ ಪ್ರೀತಿಸಲು ನಿರಾಕರಿಸಿದಾಗ, ವೆಂಕಟೇಶ್​ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿದೆ.

ಈ ಬಗ್ಗೆ ತೇಜಸ್ವಿನಿ ತನ್ನ ತಂದೆ ತಾಯಿ ಹಾಗೂ ಕೃಷ್ಣಯ್ಯನವರಿಗೂ ವಿಷಯ ತಿಳಿಸಿದ್ದಳಂತೆ. ಇದರಿಂದಾಗಿ ಕೃಷ್ಣಯ್ಯ, ವೆಂಕಟೇಶ್​ನನ್ನು ಬೆಂಗಳೂರಿಗೆ ಕಳಿಸಿದ್ದರು. ಕೊರೊನಾ ಹಿನ್ನೆಲೆ ಲಾಕ್​ಡೌನ್​ ಆಗಿದ್ದರಿಂದ ವೆಂಕಟೇಶ್ ಗುಡೂರಿಗೆ ಹಿಂದಿರುಗಿದ್ದ. ಪ್ರೀತಿಯ ಹೆಸರಲ್ಲಿ ಯುವತಿಗೆ ಕಿರುಕುಳ ನೀಡಲಾರಂಭಿಸಿದ್ದ. ಕಿರುಕುಳ ಸಹಿಸಲಾಗದೆ ಯುವತಿ ಫೋನ್​ ನಂಬರ್ ಕೂಡ ಬದಲಾಯಿಸಿದ್ದಳಂತೆ.

ಸುಧಾಕರ್ ಹಾಗೂ ಸರಿತಾ ಶಾಲೆಗೆ ಹೋಗಿದ್ದ ಸಮಯದಲ್ಲಿ, ಮನೆಯಲ್ಲಿ ತೇಜಸ್ವಿನಿ ಹಾಗೂ ಸಹೋದರ ಕಾರ್ತಿಕ್ ಮಾತ್ರ ಇದ್ದರು. ಈ ವೇಳೆ ತನ್ನ ಸ್ನೇಹಿತನ ಜತೆ ಯುವತಿ ಮನೆ ಬಳಿ ಬಂದ ವೆಂಕಟೇಶ್​, ಫೋನ್​ ನಂಬರ್​ ಕಲೆಕ್ಟ್​ ಮಾಡಿಕೊಳ್ಳಲು ಸ್ನೇಹಿತನನ್ನೇ ಕಳಿಸಿದ. ಎಚ್ಚೆತ್ತ ಕಾರ್ತಿಕ್​ ಕೆಳಗಿಳಿಯುತ್ತಿದ್ದ. ಇದನ್ನು ಗಮನಿಸಿದ ವೆಂಕಟೇಶ್ ಕೂಡಲೇ ಮನೆಯೊಳಗೆ ಹೋಗಿ, ತೇಜಸ್ವಿನಿಯಿದ್ದ ರೂಂ ಬಾಗಿಲು ಹಾಕಿ, ಚಾಕುವಿನಿಂದ ಅವಳ ಕುತ್ತಿಗೆ ಇರಿದಿದ್ದಾನೆ.

ಕಾರ್ತಿಕ್ ತಕ್ಷಣವೇ ತಂದೆ-ತಾಯಿ ಹಾಗೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾನೆ. ಸ್ಥಳಕ್ಕೆ ದೌಡಾಯಿಸಿದ ಎಸ್ಐ ಆದಿಲಕ್ಷ್ಮಿ, ಮುಚ್ಚಿದ್ದ ರೂಂ ಓಪನ್ ಮಾಡಿದ್ರು. ಈ ವೇಳೆ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ವೆಂಕಟೇಶ್​ ಕಿಟಕಿಯಿಂದ ಆಚೆ ಸೀರೆಯಲ್ಲಿ ನೇಣುಬಿಗಿದುಕೊಂಡಿದ್ದ.

ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ತೇಜಸ್ವಿನಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು. ವೆಂಕಟೇಶ್​ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಬಂದ ಗುಡೂರು ಡಿಎಸ್​ಪಿ ರಾಜಗೋಪಾಲರೆಡ್ಡಿ, ಸಿಐ ಶ್ರೀನಿವಾಸರೆಡ್ಡಿ ಮಾಹಿತಿ ಸಂಗ್ರಹಿಸಿದ್ದು, ವೆಂಕಟೇಶ್​ ಹಾಗೂ ಅವರ ತಂದೆ ಚೆಂಚು ಕೃಷ್ಣಯ್ಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details