ಕರ್ನಾಟಕ

karnataka

ETV Bharat / bharat

ಇಂದು ಸಿಂಘು ಗಡಿಯಲ್ಲಿ SKM​ ಸಭೆ : ರೈತರ ಆಂದೋಲನದ ಕುರಿತು ಮುಂದಿನ ಕ್ರಮ ಸಾಧ್ಯತೆ - ಮುಂದಿನ ಪ್ರತಿಭಟನೆ ಬಗ್ಗೆ ನಿರ್ಧಾರ ಕೈಗೊಳ್ಳಲಿರುವ ಎಸ್​ಕೆಎಮ್​

ರೈತ ಸಂಘದ ಘಟಕವಾದ ಸಂಯುಕ್ತ ಕಿಸಾನ್ ಮೋರ್ಚಾ ಇಂದು ಸಿಂಘು ಗಡಿಯಲ್ಲಿ ನಡೆಯಲಿರುವ ಸಭೆಯಲ್ಲಿ ನಡೆಯುತ್ತಿರುವ ರೈತರ ಆಂದೋಲನದ ಕುರಿತು ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

Samyukt Kisan Morcha Meeting today
ಇಂದು ಸಿಂಘು ಗಡಿಯಲ್ಲಿ ಎಸ್​ಕೆಎಮ್​ ಸಭೆ

By

Published : Dec 4, 2021, 3:59 PM IST

ನವದೆಹಲಿ:ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ಇಂದು ಸಿಂಘು ಗಡಿಯಲ್ಲಿ ನಡೆಸಲಿರುವ ಸಭೆಯಲ್ಲಿ ರೈತರ ಹೋರಾಟದ ಕುರಿತಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.

ನವೆಂಬರ್​​.21ರಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್​​ಕೆಎಮ್​​) ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ ಕೇಂದ್ರ ಸರ್ಕಾರವು ಎಲ್ಲ ಬೇಡಿಕೆಗಳಿಗೆ ಪ್ರತಿಕ್ರಿಯಿಸುವವರೆಗೂ ಕಾಯಲು ನಿರ್ಧರಿಸಿತ್ತು.

ಅದರಂತೆ ನವೆಂಬರ್​​​. 29 ರಂದು ಹಮ್ಮಿಕೊಂಡಿದ್ದ ಸಂಸತ್ತಿನವರೆಗೆ ಟ್ರ್ಯಾಕ್ಟರ್​ಗಳ ಮೆರವಣಿಗೆ (ಟ್ರ್ಯಾಕ್ಟರ್ ಮಾರ್ಚ್) ಯನ್ನು ಸ್ಥಗಿತಗೊಳಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಸಮಯ ನೀಡಿತ್ತು. ಅದರಂತೆ ಇಂದು ನಿಗದಿಯಾಗಿರುವ ಸಭೆಯಲ್ಲಿ ಕಿಸಾನ್​ ಮೋರ್ಚಾ ತನ್ನ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಿದೆ ಎನ್ನಲಾಗುತ್ತಿದೆ.

ನವೆಂಬರ್ .29 ರಂದು CKM​ ಹಮ್ಮಿಕೊಂಡಿದ್ದ ಸಂಸತ್​​​ ಪಾದಯಾತ್ರೆಯನ್ನು ಮುಂದೂಡುವ ಮೂಲಕ ಡಿಸೆಂಬರ್​.04 ರವೆರೆಗೆ ಅಂತಿಮ ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಸಮಯ ನೀಡಿದ್ದೇವೆ. ಡಿಸೆಂಬರ್​​.04 ರಂದು ಸಮಿತಿ ನಡೆಸುವ ಸಭೆಯಲ್ಲಿ ರೈತರ ಹೋರಾಟದ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು (ನವೆಂಬರ್​​ .27 ರಂದು) ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದರು.

ಗುರುನಾನಕ್ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿಯವರು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರವು ಅಗತ್ಯ ಮಸೂದೆಗಳನ್ನು ತರಲಿದೆ ಎಂದು ಘೋಷಿಸಿದ್ದರು. ಕನಿಷ್ಠ ಬೆಂಬಲ ಬೆಲೆ (ಎಂ​ಎಸ್​​ಪಿ) ಗಾಗಿ ಹೊಸ ಚೌಕಟ್ಟಿನ ಮೇಲೆ ಕೆಲಸ ಮಾಡಲು ಸರ್ಕಾರವು ಸಮಿತಿಯನ್ನು ರಚಿಸುತ್ತದೆ ಎಂದು ಪ್ರಧಾನಿ ಹೇಳಿದ್ದರು.

ಇದನ್ನೂ ಓದಿ : 1,123 ಕೆ.ಜಿ ಈರುಳ್ಳಿ ಮಾರಿದ ರೈತನಿಗೆ ಉಳಿದದ್ದು ಕೇವಲ 13 ರೂಪಾಯಿ ಮಾತ್ರ!

ABOUT THE AUTHOR

...view details