ಕರ್ನಾಟಕ

karnataka

ETV Bharat / bharat

ಧರ್ಮ ಸಂಸದ್ ವಿರುದ್ಧ ಅಸಮಾಧಾನ: ದೆಹಲಿಯಲ್ಲಿ ಎಡಪಂಥೀಯ ಪಕ್ಷಗಳ ಪ್ರತಿಭಟನೆ

ಉತ್ತರಾಖಂಡದ ಹರಿಹರದಲ್ಲಿ ಇತ್ತೀಚೆಗೆ ಧರ್ಮ ಸಂಸದ್ ನಡೆದಿದ್ದು, ಈ ಸಮಾರಂಭದಲ್ಲಿ ಮುಸ್ಲಿಂ ಸಮುದಾಯಕ್ಕೆ ಬೆದರಿಕೆ ಒಡ್ಡಿರುವ ಆರೋಪದಲ್ಲಿ ಎಡಪಂಥೀಯ ಪಕ್ಷಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸಿವೆ.

Protest against Dharma Sansad outside Uttarakhand House
ಧರ್ಮ ಸಂಸದ್ ವಿರುದ್ಧ ಅಸಮಾಧಾನ: ದೆಹಲಿಯಲ್ಲಿ ಎಡಪಂಥೀಯ ಪಕ್ಷಗಳ ಪ್ರತಿಭಟನೆ

By

Published : Dec 28, 2021, 2:22 AM IST

ನವದೆಹೆಲಿ:ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್​​ನ ಸಮಾರಂಭಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಎಡಪಂಥೀಯ ಪಕ್ಷಗಳು ದ್ವೇಷದ ವಿರುದ್ಧ ಒಗ್ಗಟ್ಟು( United Against Hate) ಎಂಬ ಘೋಷಣೆಯ ಅಡಿಯಲ್ಲಿ ನವದೆಹಲಿಯ ಉತ್ತರಾಖಂಡ್ ಹೌಸ್​ ಬಳಿ ಪ್ರತಿಭಟನೆ ನಡೆಸಿವೆ.

ಧರ್ಮ ಸಂಸದ್​​ನ ಸಮಾರಂಭದಲ್ಲಿ ಮುಸ್ಲಿಮರ ಮಾರಣಹೋಮ, ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಹೇಳಿಕೆಗಳು ಬಂದಿದ್ದವು. ಈ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಎಡಪಂಥೀಯ ಪಕ್ಷಗಳು ಪ್ರತಿಭಟನೆ ನಡೆಸಿವೆ.

ಧರ್ಮ ಸಂಸದ್ ವಿರುದ್ಧ ಅಸಮಾಧಾನ: ದೆಹಲಿಯಲ್ಲಿ ಎಡಪಂಥೀಯ ಪಕ್ಷಗಳ ಪ್ರತಿಭಟನೆ

ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಇಕ್ಬಾಲ್ ತನ್ಹಾ ಈಟಿವಿ ಭಾರತದೊಂದಿಗೆ ಮಾತನಾಡಿ, ಮುಸ್ಲಿಮರ ವಿರುದ್ಧ ಧರ್ಮ ಸಂಸದ್​​ನಲ್ಲಿ ಇಷ್ಟೆಲ್ಲಾ ದ್ವೇಷಪೂರಿತ ಭಾಷಣ ಮತ್ತು ಬೆದರಿಕೆಗಳು ಹರಿದಾಡಿದ್ದರೂ, ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದಷ್ಟೇ ಅಲ್ಲದೇ ಧರ್ಮ ಸಂಸದ್​ನ ನಡೆ ಭಾರತೀಯ ಪ್ರಜಾಪ್ರಭುತ್ವಕ್ಕೆ ಮಾರಕ. ದ್ವೇಷ ಪೂರಿತ ಹೇಳಿಕೆ ಮತ್ತು ಬೆದರಿಕೆ ಒಡ್ಡಿದ ವ್ಯಕ್ತಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲೇಬೇಕೆಂದು ಇಕ್ಬಾಲ್ ತನ್ಹಾ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:2022ರ ಹೊಸ್ತಿಲಲ್ಲಿ ನಾವು: 2021ರಲ್ಲಿ ನಡೆದ ಅಂತಾರಾಷ್ಟ್ರೀಯ ಘಟನೆಗಳ ಕ್ವಿಕ್​ಲುಕ್ ಇಲ್ಲಿದೆ.

ABOUT THE AUTHOR

...view details