ಮಹಾರಾಷ್ಟ್ರ(ಪುಣೆ):ಮೂರು ವರ್ಷಗಳ ಅವಿರತ ಪ್ರಯತ್ನದ ನಂತರ ಇಲ್ಲಿನ ಸಿಂಹಗಡ ಇಂಜಿನಿಯರಿಂಗ್ ಪ್ರಾಧ್ಯಾಪಕರೊಬ್ಬರು ಫೋಲ್ಡ್ ಸೈಕಲ್ ತಯಾರಿಸಿದ್ದಾರೆ. ಮಂದಾರ ದಿಲೀಪ್ ಪಾಟೀಲ್ (40) ಸಿನ್ಹಗಡ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪ್ರಾಧ್ಯಾಪಕರು. ಈ ಕಾಲೇಜಿನ ಕ್ಯಾಂಪಸ್ ತುಂಬಾ ವಿಶಾಲವಾಗಿದೆ. ಕಾಲೇಜಿನಿಂದ ಹಾಸ್ಟೆಲ್‌ಗಿರುವ ಅಂತರ ಕಡಿಮೆಯಾದರೂ ಇಲ್ಲಿನ ವಿದ್ಯಾರ್ಥಿಗಳು ಬೈಕ್‌ಗಳನ್ನೇ ತರುತ್ತಾರೆ. ವಿದ್ಯಾರ್ಥಿಗಳ ಬೈಕ್‌ಗಳು ಎಲ್ಲೆಂದರಲ್ಲಿ ಇಲ್ಲಿ ತುಂಬಿ ತುಳುಕುತ್ತಿವೆ.
ಅಲ್ಲದೆ, ಸೈಕ್ಲಿಸ್ಟ್‌ಗಳಿಗೆ ಸೈಕಲ್ ಸ್ಟ್ಯಾಂಡ್‌ಗಳ ಕೊರತೆಯಿಂದ ಸೈಕಲ್‌ಗಳ ಬಳಕೆ ಕಡಿಮೆಯಾಗುತ್ತಿದೆ. ಇದಕ್ಕೆ ಪರಿಹಾರವೆಂಬಂತೆ ಮಡಚಿ ಒಯ್ಯಬಹುದಾದ ಸೈಕಲ್ ತಯಾರಿಸುವ ಯೋಚನೆ ಮಾಡಿದ ಪಾಟೀಲ್, ಅಲ್ಲಿಂದ ಸೈಕಲ್ ತಯಾರಿಕೆ ಆರಂಭಿಸಿದರು. ಪಾಟೀಲ್ ತಮ್ಮ ಮನೆ ಸಮೀಪದ ಕಾರ್ಖಾನೆಯೊಂದರಲ್ಲಿ 12 ಸಾವಿರ ರೂಪಾಯಿ ವೆಚ್ಚದಲ್ಲಿ ಮಡಚುವ ಸೈಕಲ್ ವಿನ್ಯಾಸಗೊಳಿಸಿ 3 ವರ್ಷಗಳ ಹಿಂದೆ ತಯಾರಿಸಲು ಆರಂಭಿಸಿದ್ದರು. ಇದೀಗ ಮಡಿಸಿದ ಬೈಸಿಕಲ್ ಸಿದ್ಧಗೊಳಿಸಿ ಪೇಟೆಂಟ್ ಸಹ ಪಡೆದಿದ್ದಾರೆ.
ಈ ಬೈಸಿಕಲ್ ತೂಕ 13 ಕೆಜಿ ಇದೆ. ನಾಲ್ಕು ರೀತಿಯ ಮಾದರಿಗಳನ್ನು ಹೊಂದಿದೆ. ಮೆಬನ್ ಮೊಬಿಲಿಟಿ ಇನೋವೇಶನ್ ಎಂಬ ಈ ಸ್ಟಾರ್ಟಪ್ ಈ ಬೈಸಿಕಲ್ ತಯಾರಿಸುತ್ತಿದೆ. ಪ್ರಸ್ತುತ ಬೆಲೆ 12 ಸಾವಿರ ರೂ ಇದೆ.