ಲಖನೌ (ಉತ್ತರಪ್ರದೇಶ): ಶಿಕ್ಷೆಗೊಳಗಾದ ಕೈದಿಗಳಿಗೆ ಪೆರೋಲ್ ಅವಧಿ ವಿಸ್ತರಿಸದಿರಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ. ಎಲ್ಲಾ ಅಪರಾಧಿಗಳು ಜೈಲಿಗೆ ಹಿಂದಿರುಗುವಂತೆ ನೋಟಿಸ್ ನೀಡಬೇಕೆಂದು ಜೈಲಾಧಿಕಾರಿಗಳಿಗೆ ತಿಳಿಸಿದೆ.
ಕಳೆದ ಮೇ ತಿಂಗಳಲ್ಲಿ ಕೋವಿಡ್ ವ್ಯಾಪಕವಾಗಿ ಹರಡಿದ್ದರಿಂದ, ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸುಮಾರು 2,256 ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಏಳು ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆಗೆ ಒಳಪಟ್ಟಿದ್ದವರನ್ನು ರಿಲೀಸ್ ಮಾಡಲಾಗಿತ್ತು.
2,256 ಅಪರಾಧಿಗಳ ಪೈಕಿ ಶಿಕ್ಷೆ ಪೂರ್ಣಗೊಂಡಿದ್ದರಿಂದ 136 ಜನರನ್ನು ಬಿಡುಗಡೆ ಮಾಡಲಾಗಿದೆ. ಪುನಃ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 56 ಜನರನ್ನು ಬಂಧಿಸಲಾಗಿದೆ. ನಾಲ್ವರು ಮೃತಪಟ್ಟಿರುವುದಾಗಿ ರಾಜ್ಯ ಕಾರಾಗೃಹ ಇಲಾಖೆ ಮಾಹಿತಿ ನೀಡಿದೆ.