ತಿರುವನಂತಪುರ(ಕೇರಳ): ಪ್ರಧಾನಿ ನರೇಂದ್ರ ಮೋದಿ ಮತಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಸುಪ್ರೀಂ ಕೋರ್ಟ್ ಅಡ್ವೋಕೇಟ್ ಪ್ರಶಾಂತ್ ಭೂಷಣ್ ಹರಿಹಾಯ್ದಿದ್ದಾರೆ.
ಮಾಧ್ಯಮ ಸಂವಾದವೊಂದರಲ್ಲಿ ಮಾತನಾಡಿದ ಅವರಿ, ಪೋಪ್ ಜೊತೆ ನಿಂತಾಗ ಮೋದಿ ಪೋಪ್ಗಿಂತಲೂ ಚೆಂದವಾಗಿ ಕಾಣುತ್ತಾರೆ, ಬಂಗಾಳ ಚುನಾವಣೆ ವೇಳೆ ಟ್ಯಾಗೋರರಂತೆ ಗಡ್ಡ ಬಿಡ್ತಾರೆ. ಮುಸ್ಲಿಂ ಮತಗಳಿಗಾಗಿ ಇರಾನ್ನ ರಾಜಕೀಯ ಮತ್ತು ಧಾರ್ಮಿಕ ಮುಖಂಡ ಆಯತುಲ್ಲಾ ಖೊಮೇನಿ ಅವರನ್ನು ಅಪ್ಪಿಕೊಳ್ಳುತ್ತಾರೆ ಎಂದು ಪ್ರಶಾಂತ್ ಭೂಷಣ್ ವ್ಯಂಗ್ಯವಾಡಿದ್ದಾರೆ.