ಸೂರಜಕುಂಡ್ (ಹರಿಯಾಣ): ತಂತ್ರಜ್ಞಾನ ಬಳಸಿಕೊಂಡು ದೇಶದ ಕಾನೂನು ಸುವ್ಯವಸ್ಥೆ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿ ಒತ್ತು ನೀಡಿದ್ದಾರೆ. ಶುಕ್ರವಾರ ಹರಿಯಾಣದ ಸೂರಜ್‌ಕುಂಡ್‌ನಲ್ಲಿ ರಾಜ್ಯಗಳ ಗೃಹ ಸಚಿವರ ಚಿಂತನ್ ಶಿಬಿರ್ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಲು ತಂತ್ರಜ್ಞಾನದ ವೆಚ್ಚ ಇತರ ವೆಚ್ಚಗಳನ್ನು ಉಳಿಸುತ್ತದೆ ಎಂದು ಹೇಳಿದರು.
ಭಾರತದ ಕಾನೂನು ಮತ್ತು ಸುವ್ಯವಸ್ಥೆಯ ವ್ಯವಸ್ಥೆಯು ಸ್ಮಾರ್ಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ ಎಂದು ರಾಜ್ಯಗಳ ಗೃಹ ಸಚಿವರು, ಗೃಹ ಕಾರ್ಯದರ್ಶಿಗಳು, ಡಿಜಿಪಿಗಳು, ಸಿಎಪಿಎಫ್‌ಗಳು ಮತ್ತು ಸಿಪಿಒಗಳು ಭಾಗವಹಿಸಿದ್ದ ಎರಡು ದಿನಗಳ ಚಿಂತನ್ ಶಿಬಿರ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪಾಲ್ಗೊಂಡ ಪ್ರಧಾನಿ ಮೋದಿ ಹೇಳಿದರು.
ಪೊಲೀಸ್ ಪಡೆಗಳ ಆಧುನೀಕರಣ, ಮಹಿಳಾ ಸುರಕ್ಷತೆ ಮತ್ತು ಮಾದಕವಸ್ತು ಕಳ್ಳಸಾಗಣೆ ವಿಷಯ ಇವು ಸೂರಜ್‌ಕುಂಡ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಚಿಂತನ್ ಶಿಬಿರ್ನ ಕಾರ್ಯಸೂಚಿಯಲ್ಲಿ ಸೇರಿವೆ.