ಕರ್ನಾಟಕ

karnataka

ETV Bharat / bharat

ನೂತನ ರಾಷ್ಟ್ರಪತಿ ಆಯ್ಕೆ : 2ನೇ ಸುತ್ತಿನ ಮತ ಎಣಿಕೆಯಲ್ಲೂ ದ್ರೌಪದಿ ಮುರ್ಮು ಮುನ್ನಡೆ

ನೂತನ ರಾಷ್ಟ್ರಪತಿ ಆಯ್ಕೆಗೋಸ್ಕರ ಜುಲೈ 18ರಂದು ಮತದಾನವಾಗಿದ್ದು, ಮತ ಎಣಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಮೊದಲು ಹಾಗೂ ಎರಡನೇ ಸುತ್ತಿನಲ್ಲಿ ದ್ರೌಪದಿ ಮುರ್ಮು ಮುನ್ನಡೆ ಕಾಯ್ದುಕೊಂಡಿದ್ದಾರೆ.

Droupadi murmu
Droupadi murmu

By

Published : Jul 21, 2022, 3:08 PM IST

Updated : Jul 21, 2022, 5:40 PM IST

ನವದೆಹಲಿ:ದೇಶದ ನೂತನ ರಾಷ್ಟ್ರಪತಿ ಆಗಿ ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲಕ್ಕೆ ಕೆಲ ಗಂಟೆಗಳಲ್ಲಿ ತೆರೆ ಬೀಳಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು,ಮೊದಲೆರೆಡು ಸುತ್ತಿನಲ್ಲಿ ಎನ್​ಡಿಎ ಬೆಂಬಲಿತ ಅಭ್ಯರ್ಥಿ ದ್ರೌಪದಿ ಮುರ್ಮು ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಮೂಲಕ ರಾಷ್ಟ್ರಪತಿ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ರಾಷ್ಟ್ರಪತಿ ಚುನಾವಣೆಯ ಮೊದಲ ಸುತ್ತಿನ ಮತ ಎಣಿಕೆ ಫಲಿತಾಂಶವನ್ನ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ.ಸಿ ಮೂಡಿ ಪ್ರಕಟಿಸಿದ್ದಾರೆ. ಇದರಲ್ಲಿ ಎನ್​​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮ ಮುನ್ನಡೆ ಸಾಧಿಸಿದ್ದಾರೆ. ಮುರ್ಮ ಅವರಿಗೆ 540 ಮತಗಳು ಲಭಿಸಿದ್ದು, ಒಟ್ಟು ಮತದ ಮೌಲ್ಯ 3,78,000 ಆಗಿದೆ. ಅದೇ ವೇಳೆ ಯಶವಂತ್​ ಸಿನ್ಹಾ ಅವರಿಗೆ 1,45,600 ಮೌಲ್ಯದ 208 ಮತಗಳು ಲಭಿಸಿದೆ. 15 ಮತಗಳು ಅಸಿಂಧುವಾಗಿವೆ.

ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆಯ ಎರಡನೇ ಹಂತ ಮುಕ್ತಾಯಗೊಂಡಿದ್ದು, 10 ರಾಜ್ಯಗಳ ಬ್ಯಾಲೆಟ್​ ಪೇಪರ್​​ ಎಣಿಸಲಾಗಿದೆ. ಇದರಲ್ಲಿ ದ್ರೌಪದಿ ಮುರ್ಮು 809 ಮತ ಪಡೆದುಕೊಂಡಿದ್ದು, ಯಶವಂತ್ ಸಿನ್ಹಾ 329 ಮತ ಪಡೆದುಕೊಂಡಿದ್ದಾರೆ ಎಂದು ರಾಜ್ಯಸಭೆ ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿರಿ:ಸಂಸತ್ತಿನಲ್ಲಿ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಆರಂಭ

ರಾಷ್ಟ್ರಪತಿ ಚುನಾವಣೆ ಮತ ಎಣಿಕೆ ಕಾರ್ಯ ಆರಂಭಗೊಳ್ಳುತ್ತಿದ್ದಂತೆ ದ್ರೌಪದಿ ಮುರ್ಮು ಅವರ ಗ್ರಾಮ ಒಡಿಶಾದ ರಾಯಿರಂಗಪುರ್​​ದಲ್ಲಿ ಸಂಭ್ರಮಾಚರಣೆ ಶುರುವಾಗಿದೆ.

Last Updated : Jul 21, 2022, 5:40 PM IST

ABOUT THE AUTHOR

...view details