ನವದಹೆಲಿ: ಉತ್ತರ ಗಡಿಗಳಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಸಂಘರ್ಷದ ಬೆನ್ನಲ್ಲೇ ಭಾರತದ ನೌಕಾ ಪಡೆಯ 2 ಪ್ರಿಡೇಟರ್ (ಎಂಕ್ಯೂ -9 ಸೀ ಗಾರ್ಡಿಯನ್) ಡ್ರೋನ್‌ಗಳು ಹಿಂದೂ ಮಹಾಸಾಗರದಲ್ಲಿ ಸೇನೆಯ ಕಣ್ಗಾವಲು ಹೆಚ್ಚಿಸಲು ಸಹಕಾರಿಯಾಗಿವೆ ಎಂದು ನೌಕಾ ದಳದ ಉಪ ಮುಖ್ಯಸ್ಥ ಆಡ್ಮಿರಲ್ ಜಿ.ಅಶೋಕ್ ಕುಮಾರ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಮಹಾಸಾಗರದಲ್ಲಿ ಕೆಲ ಹಡಗುಗಳು ಹಾದುಹೋಗುತ್ತವೆ. ಇವುಗಳ ಮೇಲೆ ನಿಗಾ ವಹಿಸಲು ಪ್ರಿಡೇಟರ್ (ಪರಭಕ್ಷಕ) ಡ್ರೋನ್‌ಗಳನ್ನು ಬಳಸಲಾಗುತ್ತದೆ ಎಂದು ಹೇಳಿದರು. ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆ ಬಳಿಕ ಎರಡು ಡ್ರೋನ್‌ಗಳನ್ನು ಅಮೆರಿಕದಿಂದ ಭಾರತೀಯ ನೌಕಾಪಡೆಯು ಗುತ್ತಿಗೆಗೆ ಪಡೆದಿದ್ದು, ಚೀನಾದ ಯುದ್ಧನೌಕೆಗಳು ಮತ್ತು ಇತರ ಅನುಮಾನಾಸ್ಪದ ಹಡಗುಗಳ ಚಲನವನಗಳನ್ನು ಸೂಕ್ಷ್ಮವಾಗಿ ಗಮನಿಸಲು ಸಹಾಯ ಮಾಡುತ್ತವೆ ಎಂದರು.
MQ-9 ಸೀ ಗಾರ್ಡಿಯನ್ ಡ್ರೋನ್‌ಗಳು ವಿಶಾಲವಾದ ಪ್ರದೇಶದ ಮೇಲೆ ನಿಗಾ ಇಡಲು ಅನುವು ಮಾಡುತ್ತವೆ. ಜೊತೆಗೆ ಜಾಗೃತಗೊಳ್ಳಲು ನೆರವಾಗಿವೆ. ದೇಶದ ಜಲಗಡಿ ಪ್ರದೇಶವಾದ ಅರೇಬಿಯನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಕಾರ್ಯನಿರ್ವಹಿಸುವ ಯಾವುದೇ ಹಡಗಿನ ಕಾಣ್ಗಾವಲಿಗೆ ಪರಭಕ್ಷಕ ಡ್ರೋನ್‌ಗಳ ಮೂಲಕ ತುಂಬಾ ಸ್ಪಷ್ಟವಾಗಿ ಸಮೀಪದಿಂದ ನೋಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.