ಪಶ್ಚಿಮ ಚಂಪಾರಣ್:ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಟೀಕಾ ಪ್ರಹಾರ ನಡೆಸಿದ್ದಾರೆ. ತೇಜಸ್ವಿ ಯಾದವ್ ಕೇವಲ 9ನೇ ತರಗತಿ ಓದಿದ್ದಾರೆ. ಈ ವಿದ್ಯಾಹರ್ತೆಗೆ ಪ್ಯೂನ್ ಕೆಲಸ ಕೂಡಾ ಸಿಗುವುದಿಲ್ಲ. ಆದರೆ ಇವಾಗ ಅವರೇ ರಾಜ ಎಂದು ಲೇವಡಿ ಮಾಡಿದ್ದಾರೆ.
ಜನರೊಂದಿಗೆ ಮಾತನಾಡಿದ ಪ್ರಶಾಂತ್ ಕಿಶೋರ್, ಲಾಲು ಪ್ರಸಾದ್ ಯಾದವ್ ಅವರ ಮಗ 9 ನೇ ತರಗತಿ ಪಾಸಾಗಿ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದಾರೆ. ನಿಮ್ಮ ಮಕ್ಕಳು 9ನೇ ತರಗತಿ ತೇರ್ಗಡೆಯಾಗಿದ್ದರೆ ಪ್ಯೂನ್ ಕೆಲಸ ಸಿಗುತ್ತದೆಯೇ? ಎಂದು ಪ್ರಶ್ನಿಸಿದ ಅವರು, ಇವತ್ತು ಮಂತ್ರಿ -ಶಾಸಕರ ಪುತ್ರರೇ ಆಡಳಿತ ನಡೆಸುತ್ತಾರೆ. ಅದನ್ನು ಮೊದಲು ಬದಲಾಯಿಸಬೇಕಾಗಿದೆ ಎಂದರು.