ಹೈದರಾಬಾದ್:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿ ತೆಲಂಗಾಣದಲ್ಲಿ ಮುಂದುವರಿಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ಸಾಮಾಜಿಕ ಕಾರ್ಯಕರ್ತ, ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಸಾಥ್ ನೀಡಿದ್ದಾರೆ. ಮೇಡಕ್ ಜಿಲ್ಲೆಯ ಅಲ್ಲದುರ್ಗದಿಂದ ಇಂದು ನಡೆದ 60 ನೇ ದಿನದ ಯಾತ್ರೆಯಲ್ಲಿ ಅವರು ಪಾಲ್ಗೊಂಡರು.
ಮೇದಕ್ ಜಿಲ್ಲೆಯಲ್ಲಿ ಸಾಗುತ್ತಿರುವ ಯಾತ್ರೆ ಬೆಳಗ್ಗೆ ರಾಷ್ಟ್ರಗೀತೆ, ರಾಷ್ಟ್ರ ಧ್ವಜಾರೋಹಣದ ಮೂಲಕ ಆರಂಭವಾಯಿತು. ಮೇದಕ್‌ನಿಂದ ಕಾಮರೆಡ್ಡಿ ಜಿಲ್ಲೆಗೆ ಯಾತ್ರೆ ಸಾಗಲಿದೆ. ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದರು.