ಕರ್ನಾಟಕ

karnataka

ETV Bharat / bharat

ಅಂಗಾಂಗ ದಾನದ ವೇಳೆ ನಡೆಯುತ್ತಿದ್ದ ವಂಚನೆ ತಡೆಗೆ ಸಮಿತಿ ರಚನೆ.. ಅದಕ್ಕೀಗ ಪೊಲೀಸ್​ ರಕ್ಷಣೆ

ಅಕ್ರಮ ಅಂಗಾಂಗ ದಾನ ತಡೆಗೆ ವಿಭಾಗೀಯ ಅಂಗ ದಾನ ಪ್ರಾಧಿಕಾರ ಸಮಿತಿ ರಚನೆ - ಮಹಾರಾಷ್ಟ್ರದಲ್ಲಿ ಈಗಾಗಲೇ ಇದ್ದ ಸಮಿತಿಗೆ ಪೊಲೀಸರ ಸೇರ್ಪಡೆ - ಕಳ್ಳತನ ತಡೆ ಮಹಾ ಸರ್ಕಾರದ ಮಹತ್ವದ ನಿರ್ಧಾರ

Divisional Organ Donation Authority Committee
ವಿಭಾಗೀಯ ಅಂಗ ದಾನ ಪ್ರಾಧಿಕಾರ ಸಮಿತಿ

By

Published : Jan 28, 2023, 10:49 PM IST

ಮುಂಬೈ(ಮಹಾರಾಷ್ಟ್ರ):ಮಾನವನ ಅಂಗಾಂಗ ಕಸಿ ಸಂದರ್ಭದಲ್ಲಿ ಲಕ್ಷಾಂತರ ವಹಿವಾಟು ನಡೆಸಿ ಬೋಗಸ್ ದಾನಿಗಳನ್ನು ಸೃಷ್ಟಿಸಿ ವಂಚನೆ ಮಾಡುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇಂತಹ ವಂಚನೆ, ಅವ್ಯವಹಾರ ನಡೆಯದಂತೆ ಅಂಗಾಂಗ ದಾನ ಮಾಡುವಾಗ ಸಂಬಂಧಪಟ್ಟ ವ್ಯಕ್ತಿಯೇ ಇರುವಂತೆ ನೋಡಿಕೊಳ್ಳಲು ವಿಭಾಗೀಯ ಅಂಗ ದಾನ ಪ್ರಾಧಿಕಾರ ಸಮಿತಿಯನ್ನು ಈಗಾಗಲೇ ಮಹಾರಾಷ್ಟ್ರ ಸರ್ಕಾರ ರಚನೆ ಮಾಡಿತ್ತು. ಆದರೆ ಅದಕ್ಕೀಗ ಪೊಲೀಸ್​ ರಕ್ಷಣೆ ನೀಡುವ ಮೂಲಕ ಅಂಗಾಗ ದಾನ ವಂಚನೆ ತಡೆಗೆ ಪೊಲೀಸ್ ಬಲ ನೀಡಿದೆ.

ಅವ್ಯವಹಾರ ತಡೆಗೆ ಇಲಾಖೆವಾರು ಸಮಿತಿ: ರಾಜ್ಯದಲ್ಲಿ ಅಕ್ರಮ ಅಂಗಾಂಗ ದಾನ ತಡೆಗೆ ಮಹಾರಾಷ್ಟ್ರ ಸರ್ಕಾರದಿಂದ ಈಗಾಗಲೇ ಕಾನೂನು ರೂಪಿಸಲಾಗಿತ್ತು. ಅದರಂತೆ 1994ರಲ್ಲಿ ಸರ್ಕಾರದ ನಿರ್ಧಾರ ಕೈಗೊಳ್ಳಲಾಗಿತ್ತು. ಹಾಗೂ ಇದನ್ನು 2018 ರಿಂದಲೇ ಜಾರಿಗೆ ತರಲಾಗಿತ್ತು. ಅಂಗಾಂಗ ದಾನದ ವೇಳೆ ಯಾವುದೇ ಅವ್ಯವಹಾರ ನಡೆಯದಂತೆ ನೋಡಿಕೊಳ್ಳಲು ಸರ್ಕಾರ ರಾಜ್ಯ ಮಟ್ಟದಲ್ಲಿ ಹಾಗೂ ಇಲಾಖಾ ಮಟ್ಟದಲ್ಲಿ ಸಮಿತಿಯನ್ನು ರಚಿಸಿದೆ.

ಅಂಗಾಂಗ ದಾನಿಗಳು ಮತ್ತು ಅಂಗಾಂಗ ಸ್ವೀಕರಿಸುವವರ ನಡುವೆ ಯಾವುದೇ ಹಣದ ವ್ಯವಹಾರ ನಡೆದಿದೆಯೇ ಎಂಬುದನ್ನು ಪರಿಶೀಲಿಸಿ, ಅವರ ದಾಖಲೆಗಳನ್ನು ಪರಿಶೀಲಿಸಿ ನಂತರ ಅಂಗಾಂಗ ದಾನಕ್ಕೆ ಅವಕಾಶ ನೀಡುವ ಜವಾಬ್ದಾರಿ ಸಮಿತಿಯ ಮೇಲಿದೆ. ಆದರೆ ಈ ಸಮಿತಿಯಲ್ಲಿರುವ ಎಲ್ಲ ಸದಸ್ಯರು ವೈದ್ಯರು ಇರುವುದರಿಂದ ಸತ್ಯಾಸತ್ಯತೆ ಪರಿಶೀಲಿಸಲು ಸಮಿತಿಗೆ ಸಾಧ್ಯವಾಗುವುಗುದಿಲ್ಲ ಎಂದು ಈಗ ಪೊಲೀಸರೂ ಸಹ ಸಮಿಯಲ್ಲಿರುವಂತೆ ಮಾಡಲಾಗಿದೆ.

ಸಮಿತಿಯಲ್ಲಿ ಪೊಲೀಸರ ನೇಮಕ: ಅಂಗಾಂಗ ದಾನಕ್ಕೆ ಬರುವ ವ್ಯಕ್ತಿಯನ್ನು ಪರಿಶೀಲಿಸುವಾಗ ವೈದ್ಯರು ಹೇಳುತ್ತಿರುವುದು ಸತ್ಯವೇ, ವ್ಯಕ್ತಿ ಸಲ್ಲಿಸಿರುವ ದಾಖಲೆಗಳು ಅಸಲಿಯೇ ಎಂಬುದನ್ನು ಪರಿಶೀಲಿಸಲು ವೈದ್ಯರಿಗೆ ಸಾಧ್ಯವಾಗುತ್ತಿಲ್ಲ. ಅಂಗಾಂಗ ದಾನಿಗಳು ಮತ್ತು ಸ್ವೀಕರಿಸುವವರ ಬಳಿ ದಾಖಲೆಗಳನ್ನು ಮತ್ತು ಕ್ಯಾಮರಾದ ಮೂಲಕ ವಿಡಿಯೋ ವಿಚಾರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ, ವ್ಯಕ್ತಿಯ ಹಾವಭಾವಗಳ ಸತ್ಯಾಸತ್ಯತೆ ಮತ್ತು ಅವರು ಹೇಳುವ ಮಾಹಿತಿಯ ಸತ್ಯತೆಯನ್ನು ಅಳೆಯಲು ಪೊಲೀಸರ ಸಹಾಯ ಪಡೆಯ ಬೇಕಾಗಿತ್ತು.

ಈಗ ಅದಕ್ಕಾಗಿ ಸಮಿತಿಯಲ್ಲಿ ಪೊಲೀಸ್ ಅಧಿಕಾರಿಗಳನ್ನು ನೇಮಿಸಬೇಕು ಎಂದು ಆಗ್ರಹ ಕೇಳಿ ಬಂದಿತ್ತು. ಅದರಂತೆ ಈ ಬೇಡಿಕೆಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಸಮಿತಿಯ ಅಧ್ಯಕ್ಷ ಡಾ. ತುಷಾರ್ ಪಾಲ್ವೆ ಅವರು ಇದೀಗ ದಕ್ಷಿಣ ಮುಂಬೈನಲ್ಲಿರುವ ವಿಭಾಗೀಯ ಅಂಗಗಳ ವಾಪಸಾತಿ ಪ್ರಾಧಿಕಾರದ ಸಮಿತಿಗೆ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

1997 ರಿಂದ 2022ರ ಅವಧಿಯಲ್ಲಿ ರಾಜ್ಯದಲ್ಲಿ 985 ಕಿಡ್ನಿ, 456 ಲಿವರ್, 3 ಕಿಡ್ನಿ ಮತ್ತು ಲಿವರ್, 181 ಹೃದಯ, 39 ಶ್ವಾಸಕೋಶ, 5 ಹೃದಯ ಮತ್ತು ಶ್ವಾಸಕೋಶ, 5 ಕಿಡ್ನಿ ಮತ್ತು ಮೇದೋಜೀರಕ ಗ್ರಂಥಿ, 3 ಸಣ್ಣ ಕರುಳನ್ನು ಜೋಡಣೆ ಮಾಡಲಾಗಿದೆ. ಅದರಲ್ಲಿ 11 ಮಂದಿಗೆ ವಿಭಾಗೀಯ ಅಂಗ ದಾನ ಕೇಂದ್ರ ಮುಂಬಯಿಯಲ್ಲಿ ಅಂಗಾಂಗ ದಾನ ಮಾಡಲಾಗಿದೆ.

ಯಾರು ಅಂಗಗಳನ್ನು ದಾನ ಮಾಡಬಹುದು: ಒಬ್ಬ ವ್ಯಕ್ತಿಯು ಮೆದುಳು ಸತ್ತಾಗ, ಅವರ ಅಂಗಗಳನ್ನು ದಾನ ಮಾಡಬಹುದು. ಬದುಕಿದ್ದಾಗ ಕಿಡ್ನಿ ಕಸಿ ಮಾಡಲಾಗುತ್ತದೆ. 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಸ್ವಯಂಪ್ರೇರಣೆಯಿಂದ ಅಂಗಾಂಗ ದಾನ ಮಾಡಬಹುದು.

ಇದನ್ನೂ ಓದಿ:ರಂಗಭೂಮಿ ಕಲಾವಿದನ ಮೆದುಳು ನಿಷ್ಕ್ರಿಯ: ಅಂಗಾಂಗ ದಾನದ ಮೂಲಕ ಏಳು ಜನರಿಗೆ ಹೊಸ ಜೀವನ ಕೊಟ್ಟ ನಟ

ABOUT THE AUTHOR

...view details