ಹೈದರಾಬಾದ್: ಚೈನ್ ಮಾರ್ಕೆಟಿಂಗ್ ಹಗರಣದಲ್ಲಿ ಭಾಗಿಯಾಗಿರುವ ಗ್ಯಾಂಗ್ ಬಂಧನ ಮಾಡುವಲ್ಲಿ ಸೈಬರಾಬಾದ್ ಪೊಲೀಸರು ಯಶಸ್ವಿಯಾಗಿದ್ದು, ಅವರಿಂದ ಬರೋಬ್ಬರಿ 1,500 ಕೋಟಿ ರೂ ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಸೈಬರಾಬಾದ್ ಪೊಲೀಸ್ ಕಮೀಷನರ್ ಸಜ್ಜನರ್ ಮಾಹಿತಿ ನೀಡಿದ್ದು, ಸಿಂಧೂ ವಿವಾ ಹೆಲ್ತ್ ಸೈನ್ಸಸ್ ಹಗರಣಗಳಲ್ಲಿ ಭಾಗಿಯಾಗಿದ್ದು, ಗೊತ್ತಾಗಿದ್ದು, 24 ಸದಸ್ಯರ ಗ್ಯಾಂಗ್ ಬಂಧನ ಮಾಡಲಾಗಿದೆ ಎಂದಿದ್ದಾರೆ. ಜತೆಗೆ 20 ಕೋಟಿ ರೂ. ಬ್ಯಾಂಕ್ನಲ್ಲಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.