ನವದೆಹಲಿ: 'ಪ್ರತಿಯೊಬ್ಬ ವೀರನ ಹೃದಯದಲ್ಲಿ ಒಂದು ಸಿಂಹ ನಿದ್ರಿಸುತ್ತಿರುತ್ತದೆ' ಅನ್ನೋದು ಟರ್ಕಿಶ್ ಗಾದೆ. ಈ ಗಾದೆ ಸಿಂಹದ ಪರಾಕ್ರಮವನ್ನು ಸೂಚಿಸುತ್ತದೆ. 'ಸತ್ಯ ಎಂಬುದು ಸಿಂಹವಿದ್ದ ಹಾಗೆ. ಅದು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ, ಬೇರೊಬ್ಬರ ಅಗತ್ಯವಿಲ್ಲ ಎಂಬುದು ತತ್ವಜ್ಞಾನಿಯೋರ್ವ ಸಿಂಹಕ್ಕೆ ಸತ್ಯವನ್ನು ಹೋಲಿಸಿ ಹೇಳಿರುವ ಮತ್ತೊಂದು ಮಾತು. ಈ ರೀತಿಯಾಗಿ ಸಾಕಷ್ಟು ಮಂದಿ ಸಿಂಹವನ್ನು ಪರಾಕ್ರಮ, ಧೈರ್ಯಗಳಿಗೆ ಸಂಕೇತವನ್ನಾಗಿ ಬಳಸಿದ್ದಾರೆ.
ವಿಶ್ವ ಸಿಂಹಗಳ ದಿನ. ಸಿಂಹಗಳ ರಕ್ಷಣೆ ಮತ್ತು ಅವುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತೀ ವರ್ಷ ಆಗಸ್ಟ್ 10ರಂದು ವಿಶ್ವ ಸಿಂಹಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪ್ರಸ್ತುತ ಐಯುಸಿಎನ್ (International Union for Conservation of Nature) ವರದಿ ಸಿಂಹಗಳನ್ನು ಕೆಂಪು ಪಟ್ಟಿಗೆ ಸೇರಿಸಿರುವ ಕಾರಣದಿಂದ ಅವುಗಳ ರಕ್ಷಣೆಗೆಂದು ಒಂದು ದಿನದ ಅನಿವಾರ್ಯತೆಯಿದೆ.
ಮೃಗರಾಜ ಅಥವಾ ಕಾಡಿನ ರಾಜ ಎಂದೇ ಹೆಸರುವಾಸಿಯಾಗಿರುವ ಸಿಂಹಗಳ ಸಂಖ್ಯೆ ಭಾರತದ ಹಲವೆಡೆ ಹೆಚ್ಚಾಗುತ್ತಿದೆ ಎಂಬುದು ಸಂತಸ ವಿಚಾರ. ಭಾರತದ ಗುಜರಾತ್ನಲ್ಲಿರುವ ಗಿರ್ ಕಾಡುಗಳು ಏಷ್ಯಾಟಿಕ್ ಸಿಂಹಗಳಿಗೆ ಹೆಸರುವಾಸಿಯಾಗಿದ್ದು, ಈ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತವೆ.
ಸಿಂಹಗಳ ಬಗ್ಗೆ ಕುತೂಹಲಕಾರಿ ಸಂಗತಿಗಳು...
- ಸಿಂಹಗಳ ಘರ್ಜನೆ ಸುಮಾರು 45 ಕಿಲೋಮೀಟರ್ವರೆಗೆ ಕೇಳಬಲ್ಲದು
- ಸಾಮಾನ್ಯವಾಗಿ ಸಿಂಹಗಳು ರಾತ್ರಿ ಬೇಟೆಯಾಡುತ್ತವೆ. ಅವುಗಳ ಕಣ್ಣುಗಳು ಕತ್ತಲಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿವೆ.
- ಹೆಣ್ಣು ಸಿಂಹಗಳು ಚಿಕ್ಕವಾಗಿದ್ದು, ಗಂಡು ಸಿಂಹಗಳಿಗಿಂತ ಹೆಚ್ಚು ಬೇಗ ಬೇಟೆಯಾಡುತ್ತವೆ.
- ಸಿಂಹಗಳಿಗೆ ದಟ್ಟವಾದ ಕಾಡುಗಳಿಗಿಂತ, ಕುರುಚಲು ಕಾಡು, ಬಂಡೆಗಳು ಇಷ್ಟ
- ಮರುಭೂಮಿಗಳಲ್ಲೂ ಕೂಡಾ ಸಿಂಹಗಳು ವಾಸಿಸುವ ಸಾಮರ್ಥ್ಯವಿದೆ.
- ಒಂದು ಬಾರಿ ಸುಮಾರು 40 ಕೆ.ಜಿ ಮಾಂಸವನ್ನು ಸಿಂಹಗಳು ತಿನ್ನಬಲ್ಲವು.
- 1972ಕ್ಕೂ ಮೊದಲು ಭಾರತದ ರಾಷ್ಟ್ರೀಯ ಪ್ರಾಣಿ ಸಿಂಹ ಆಗಿತ್ತು.
ಭಾರತದಲ್ಲಿರುವ ಸಿಂಹಗಳ ಬಗ್ಗೆ..