ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ಮಾಸಿಕ ಬಾನುಲಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಒಂದಿಲ್ಲೊಂದು ಸಂದೇಶ, ಸಲಹೆ ನೀಡುತ್ತಾರೆ. ಈ ಬಾರಿಯ 92 ನೇ ಸಂಚಿಕೆಯಲ್ಲಿ ಮಾತನಾಡುತ್ತಾ, ಪ್ರತಿ ಭಾನುವಾರ ದೂರದರ್ಶನದಲ್ಲಿ ಪ್ರಸಾರವಾಗುವ "ಸ್ವರಾಜ್ ಧಾರಾವಾಹಿ"ಯನ್ನು ವೀಕ್ಷಿಸುವಂತೆ ಸಲಹೆ ನೀಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಮಹಾನ್ ವೀರರ ಬಗ್ಗೆ ಅರಿವು ಮೂಡಿಸುವ ಸ್ವರಾಜ್ ಧಾರಾವಾಹಿ ಎಲ್ಲರೂ ತಪ್ಪದೇ ವೀಕ್ಷಿಸಿ, ನಿಮ್ಮ ಮಕ್ಕಳಿಗೂ ಇದನ್ನು ತೋರಿಸಿ. ಯುವ ಪೀಳಿಗೆ ದೇಶದ ಮಹಾನ್ ವೀರರ ಬಗ್ಗೆ ಅರಿತುಕೊಳ್ಳಬೇಕು. ಸ್ವರಾಜ್ಯ ಧಾರಾವಾಹಿಯ ಮೊದಲ ಪ್ರದರ್ಶನದಲ್ಲಿ ನಾನು ಭಾಗವಹಿಸಿದ್ದೆ. ಅಪ್ರತಿಮ ವೀರರು, ವೀರನಾರಿಯರನ್ನು ಪರಿಚಯಿಸುವ ಅತ್ಯುತ್ತಮ ಪ್ರಯತ್ನ ಇದಾಗಿದೆ ಎಂದು ಹೇಳಿದರು.
ಮಕ್ಕಳು ಇದನ್ನು ವೀಕ್ಷಿಸುವ ಮೂಲಕ ಶಾಲಾ ಕಾಲೇಜುಗಳಲ್ಲಿ ಸ್ವಾತಂತ್ರ್ಯ ವೀರರ ಬಗ್ಗೆ ಕೇಳಿದಾಗ ರೆಕಾರ್ಡ್ಗಳನ್ನು ದಾಖಲು ಮಾಡಬಹುದು. ಇವುಗಳ ಮೇಲೆ ವಿಶೇಷ ಕಾರ್ಯಕ್ರಮಗಳನ್ನೂ ರೂಪಿಸಬಹುದು. ಇದರಿಂದ ದೇಶದಲ್ಲಿ ಹೊಸ ಜಾಗೃತಿ ಮೂಡುತ್ತದೆ ಎಂದರು.