ನವದೆಹಲಿ : ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಟೋಕಿಯೋ ಪ್ಯಾರಾಲಿಂಪಿಕ್ ಗೇಮ್ಸ್-2020ರಲ್ಲಿ ಭಾಗವಹಿಸಲಿರುವ ಆಟಗಾರರೊಂದಿಗೆ ಪ್ರಧಾನಿ ಮೋದಿ ಇಂದು ಸಂವಾದ ನಡೆಸಲಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಆಗಸ್ಟ್ 17ರ ಬೆಳಗ್ಗೆ 11ಕ್ಕೆ ಪ್ಯಾರಾಲಿಂಪಿಕ್ ಸ್ಪರ್ಧಿಗಳೊಂದಿಗೆ ಸಂವಾದ ನಡೆಸಲಿದ್ದೇನೆ. ಇವರು ಅತ್ಯುತ್ತಮ ಆಟಗಾರರಾಗಿದ್ದು, ಅತ್ಯುತ್ತಮ ಕೌಶಲ್ಯವನ್ನು ಮತ್ತು ದೃಢತೆಯನ್ನು ಹೊಂದಿದ್ದು, ಕ್ರೀಡಾ ಪ್ರೇಮಿಗಳು ಈ ಕಾರ್ಯಕ್ರಮ ವೀಕ್ಷಿಸಲು ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.
ಆಗಸ್ಟ್ 24ರಿಂದ ಟೋಕಿಯೋ ಪ್ಯಾರಾಲಿಂಪಿಕ್ ಸ್ಪರ್ಧೆಗಳು ನಡೆಯಲಿದ್ದು, ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆಯ ಮಾಹಿತಿಯಂತೆ 9 ಸ್ಪರ್ಧೆಗಳಿಂದ 54 ಸ್ಪರ್ಧಿಗಳು ಭಾರತದಿಂದ ಭಾಗವಹಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಹೆಚ್ಚು ಮಂದಿ ಭಾರತದಿಂದ ಪ್ಯಾರಾಲಿಂಪಿಕ್ನಲ್ಲಿ ಭಾಗವಹಿಸುತ್ತಿದ್ದಾರೆ.
ಕ್ರೀಡಾಪಟುಗಳು ಪ್ರಧಾನಿ ಮೋದಿ ಅವರೊಂದಿಗಿನ ಸಂವಾದದ ವೇಳೆ ಕೇಂದ್ರ ಕ್ರೀಡಾಸಚಿವ ಅನುರಾಗ್ ಠಾಕೂರ್ ಭಾಗವಹಿಸಲಿದ್ದಾರೆ.
ಇದನ್ನೂ ಓದಿ:ಆಫ್ಘನ್ ಸದ್ಯದ ಪರಿಸ್ಥಿತಿಗೆ ಅಲ್ಲಿನ ನಾಯಕರೇ ಕಾರಣ, ನಾವಲ್ಲ: ಜೋ ಬೈಡನ್ ಸಮರ್ಥನೆ