ಕರ್ನಾಟಕ

karnataka

ETV Bharat / bharat

ನಾಳೆ 7 ಹೊಸ ರಕ್ಷಣಾ ಕಂಪನಿಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ - ರಕ್ಷಣಾ ಸಚಿವಾಲಯ

ರಕ್ಷಣಾ ವಲಯದ ಶಸ್ತ್ರಾಸ್ತ್ರ, ಸಾಧನಗಳನ್ನು ತಯಾರಿಸುವ ಸಾರ್ವಜನಿಕ ವಲಯದ 7 ಹೊಸ ರಕ್ಷಣಾ ಕಂಪನಿಗಳನ್ನು ಪ್ರಧಾನಿ ಮೋದಿ ಅಕ್ಟೋಬರ್‌ 15 ರಂದು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

PM Modi
ಪ್ರಧಾನಿ ಮೋದಿ

By

Published : Oct 14, 2021, 8:59 PM IST

ನವದೆಹಲಿ: ರಕ್ಷಣಾ ವಲಯದ ಶಸ್ತ್ರಾಸ್ತ್ರಗಳನ್ನು, ಸಾಧನಗಳನ್ನು ತಯಾರಿಸುವ ಸಾರ್ವಜನಿಕ ವಲಯದ 7 ಹೊಸ ರಕ್ಷಣಾ ಕಂಪನಿಗಳಿಗೆ ನಾಳೆ(ಅಕ್ಟೋಬರ್‌ 15)ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪತ್ರಿಕಾ ಪ್ರಕಟಣೆಯಂತೆ ನಾಳೆ ಮಧ್ಯಾಹ್ನ 12.10 ಕ್ಕೆ ಏಳು ಹೊಸ ರಕ್ಷಣಾ ಕಂಪನಿಗಳನ್ನು ದೇಶಕ್ಕೆ ಅರ್ಪಿಸಲಿದ್ದು, ವಾಸ್ತವಿಕವಾಗಿ ಭಾಷಣ ಮಾಡಲಿದ್ದಾರೆ.ಈ ವರ್ಚುವಲ್​​ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಡಿಫೆನ್ಸ್ ಮತ್ತು ರಕ್ಷಣಾ ಉದ್ಯಮ ಸಂಘಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.

ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್ (MIL) ಅನ್ನು ಸೇರಿಸಲಾಗಿರುವ ಏಳು ಹೊಸ ರಕ್ಷಣಾ ಕಂಪನಿಗಳೆಂದರೆ; ಶಸ್ತ್ರಸಜ್ಜಿತ ವಾಹನಗಳು ನಿಗಮ್ ಲಿಮಿಟೆಡ್ (AVANI); ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWE India); ಟ್ರೂಪ್ ಕಂಫರ್ಟ್ಸ್ ಲಿಮಿಟೆಡ್ (TCL); ಯಂತ್ರ ಇಂಡಿಯಾ ಲಿಮಿಟೆಡ್ (YIL); ಇಂಡಿಯಾ ಆಪ್ಟೆಲ್ ಲಿಮಿಟೆಡ್ (IOL); ಮತ್ತು ಗ್ಲೈಡರ್ಸ್ ಇಂಡಿಯಾ ಲಿಮಿಟೆಡ್ (GIL)

ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ ಅನ್ನು ಸರ್ಕಾರಿ ಇಲಾಖೆಯಿಂದ ಏಳು ಶೇ 100 ಸರ್ಕಾರಿ ಸ್ವಾಮ್ಯದ ಕಾರ್ಪೊರೇಟ್ ಸಂಸ್ಥೆಗಳಾಗಿ ಪರಿವರ್ತಿಸಿದ ನಂತರ ಈ ಹೊಸ ರಕ್ಷಣಾ ಕಂಪನಿಗಳನ್ನು ಸ್ಥಾಪಿಸಲಾಗಿದೆ. ಈ ಕಂಪನಿಗಳು ದೇಶದ ರಕ್ಷಣೆಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ವಾಹನಗಳು, ಅಸ್ತ್ರಗಳು ಹಾಗೂ ಇತರ ಸಲಕರಣೆಗಳು, ಸೇನಾಪಡೆಗಳಿಗೆ ಬೇಕಾಗುವ ವಸ್ತುಗಳು, ಪ್ಯಾರಾಚೂಟ್​ಗಳನ್ನು ತಯಾರಿಸಲಿವೆ.

ABOUT THE AUTHOR

...view details