ಕರ್ನಾಟಕ

karnataka

By

Published : Nov 21, 2020, 4:16 AM IST

Updated : Nov 21, 2020, 5:02 AM IST

ETV Bharat / bharat

ಕೊರೊನಾ ವೈರಸ್​ ಲಸಿಕೆ ಪ್ರಗತಿ ಬಗ್ಗೆ ಮಾಹಿತಿ ಪಡೆದ ಪ್ರಧಾನಿ

ದೇಶದಲ್ಲಿ ಕೊರೊನಾ ವೈರಸ್​ ಲಸಿಕೆ ಸಿದ್ಧಪಡಿಸುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿ ಪ್ರಗತಿ ಬಗ್ಗೆ ಮಾಹಿತಿ ಪಡೆದರು.

PM Modi reviews India's COVID-19 vaccination strategy
ಕೊರೊನಾ ವೈರಸ್​ ಲಸಿಕೆ ಪ್ರಗತಿ ಬಗ್ಗೆ ಮಾಹಿತಿ ಪಡೆದ ಪ್ರಧಾನಿ

ನವದೆಹಲಿ:ದೇಶದಲ್ಲಿ ಕೊರೊನಾ ವೈರಸ್​ ಲಸಿಕೆ ಸಂಶೋಧನೆ ಪ್ರಗತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ.

ಕೋವಿಡ್-19 ಲಸಿಕೆ ಅಭಿವೃದ್ಧಿ, ನಿಯಂತ್ರಕ ಅನುಮೋದನೆಗಳು ಮತ್ತು ಸಂಗ್ರಹಣೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಪಿಎಂ ಚರ್ಚೆ ನಡೆಸಿದರು. ಜನಸಂಖ್ಯೆಗೆ ಅನುಗುಣವಾಗಿ ಆದ್ಯತೆ ನೀಡುವುದು, ವೈದ್ಯಕೀಯ ಸಿಬ್ಬಂದಿಯನ್ನು ತಲುಪುವುದು, ಮೂಲಸೌಕರ್ಯ ವೃದ್ಧಿ ಸೇರಿ ಹಲವಾರು ವಿಷಯಗಳ ಬಗ್ಗೆ ಅವರು ಪರಿಶೀಲಿಸಿದರು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ.

ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರು ಭಾರತ್ ಬಯೋಟೆಕ್‌ನ ಕೋವಿಡ್​-19 ಲಸಿಕೆ 'ಕೋವಾಕ್ಸಿನ್' ಪರೀಕ್ಷೆಗೆ ಒಳಗಾಗಿದ್ದಾರೆ. ಅವರು ರಾಜ್ಯದಲ್ಲಿ ಪ್ರಾರಂಭವಾದ ಕೊವಾಕ್ಸಿನ್‌ ಮೂರನೇ ಹಂತದ ಪರೀಕ್ಷೆಗೆ ಮೊದಲ ಸ್ವಯಂಸೇವಕರಾಗಲು ಮುಂದಾಗಿದ್ದರು.

Last Updated : Nov 21, 2020, 5:02 AM IST

ABOUT THE AUTHOR

...view details