ಕರ್ನಾಟಕ

karnataka

ETV Bharat / bharat

ಸ್ವಚ್ಛ ಭಾರತ ಮಿಷನ್​​ 2.0ಗೆ ಚಾಲನೆ: ಇದು ಮಾತೃಭೂಮಿ ಮೇಲೆ ಪ್ರೀತಿ ಹೊಂದಿರುವ ಅಭಿಯಾನ-ಮೋದಿ ಬಣ್ಣನೆ - ಅಮೃತ್ 2.0 ಅಭಿಯಾನಕ್ಕೆ ಚಾಲನೆ

ಸ್ವಚ್ಛ ಭಾರತ ಯೋಜನೆ ನಗರ 2.0 ಮತ್ತು ಅಮೃತ್​ 2.0ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. ನಗರಗಳನ್ನು ಕಸಮುಕ್ತ ಮತ್ತು ಜಲ ಸುರಕ್ಷಿತತೆಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಜಾರಿಗೊಳಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

PM Modi
PM Modi

By

Published : Oct 1, 2021, 4:30 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಮಿಷನ್​​ ನಗರ​​ 2.0 ಹಾಗೂ ಅಮೃತ್​​ 2.0ಗೆ (Swachh Bharat Mission Urban 2.0) ಚಾಲನೆ ನೀಡಿದ್ದು, ಇದು ಮಾತೃಭೂಮಿ ಮೇಲೆ ಪ್ರೀತಿ ಹೊಂದಿರುವ ಅಭಿಯಾನ ಎಂದು ಬಣ್ಣಿಸಿದರು.

ನಗರಗಳನ್ನು ಕಸ ಮುಕ್ತವನ್ನಾಗಿಸುವುದು ಮತ್ತು ಜಲ ಸುರಕ್ಷಿತತೆಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. 2014ರಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದು, ಇದು ಮುಂದುವರೆದ ಭಾಗವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿರುವ ಮೋದಿ, ದೇಶದಲ್ಲಿ ಪ್ರತಿದಿನ 1 ಲಕ್ಷಕ್ಕೂ ಅಧಿಕ ಟನ್ ಕಸ ಉತ್ಪಾದನೆಯಾಗುತ್ತಿದೆ. ಅದನ್ನು ನಿರ್ವಹಣೆ ಮಾಡಲು ಪ್ರಮುಖ ಆದ್ಯತೆ ನೀಡಲಾಗುವುದು ಎಂದರು.

ಕಸಮುಕ್ತ ನಗರವಾಗಿಸುವ ಜೊತೆಗೆ ಒಳಚರಂಡಿ ವ್ಯವಸ್ಥೆಗೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಕೊಳಕು ನೀರು ನದಿಗಳಲ್ಲಿ ವಿಲೀನವಾಗದಂತೆ ನೋಡಿಕೊಳ್ಳಲು ನಾವೆಲ್ಲರೂ ಪ್ರತಿಜ್ಞೆ ಮಾಡಬೇಕು ಎಂದು ಕರೆ ಕೊಟ್ಟರು. ಸ್ವಚ್ಛ ಭಾರತ ಮಿಷನ್​​ ಈಗಾಗಲೇ ಯಶಸ್ವಿಯಾಗಿದ್ದು, ದೇಶಾದ್ಯಂತ ಲಕ್ಷಾಂತರ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ದೇಶದಲ್ಲಿ ಶೇ. 20ರಷ್ಟು ಕಸ ಸಂಸ್ಕರಣೆ ಮಾಡಲಾಗುತ್ತಿತ್ತು. ಆದರೆ ಇದನ್ನು ಶೇ. 70ಕ್ಕೆ ಏರಿಸಲಾಗಿದೆ. ಬರುವ ದಿನಗಳಲ್ಲಿ ಅದನ್ನು ಶೇ. 100ಕ್ಕೆ ಏರಿಸಲಾಗುವುದು ಎಂಬ ಭರವಸೆ ನೀಡಿದರು. ದೇಶದ ವಿವಿಧ ನಗರಗಳಲ್ಲಿ ಕಸದ ರಾಶಿ ಶಿಖರಗಳಾಗಿ ಮಾರ್ಪಟ್ಟಿದ್ದು, ಸ್ವಚ್ಛ ಭಾರತ ಅಭಿಯಾನದ ಎರಡನೇ ಅಭಿಯಾನದಲ್ಲಿ ಇಂತಹ ಶಿಖರ ಸಂಪೂರ್ಣವಾಗಿ ತೆಗೆದು ಹಾಕುವ ಕೆಲಸ ನಡೆಯಲಿದೆ ಎಂದರು.

ಇದನ್ನೂ ಓದಿ:ಏರ್​ ಇಂಡಿಯಾ TATA ಗ್ರೂಪ್ ಪಾಲಾಗಿದೆ ಎಂಬ ವರದಿ ನಿರಾಕರಿಸಿದ ಕೇಂದ್ರ ಸರ್ಕಾರ

ಸ್ವಚ್ಛ ಭಾರತ ಮಿಷನ್​ 2.0 ಎಲ್ಲ ನಗರ ಕಸಮುಕ್ತ ಮಾಡುವ ಅಭಿಯಾನವಾಗಿದ್ದು, ಎಲ್ಲ ನಗರ ಪ್ರದೇಶಗಳಲ್ಲಿ ಸುರಕ್ಷಿತ ನೈರ್ಮಲ್ಯ ಸಾಧಿಸುವ ಮಹತ್ತರ ಗುರಿ ಕೇಂದ್ರ ಸರ್ಕಾರದ ಮುಂದಿದೆ. ಈ ಅಭಿಯಾನದಲ್ಲಿ ಬಯಲು ಶೌಚ ಸಂಪೂರ್ಣವಾಗಿ ತೊಡೆದುಹಾಕುವ ಗುರಿ ಹೊಂದಿದೆ ಎಂದು ಹೇಳಿದರು.

ABOUT THE AUTHOR

...view details