ನವದೆಹಲಿ: ಇಂದೂ ಕೂಡ ದೇಶಾದ್ಯಂತ ಇಂಧನ ದರ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ತಲಾ 35 ಪೈಸೆಯಷ್ಟು ಹೆಚ್ಚಿಸಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 35 ಪೈಸೆ ಹೆಚ್ಚಳದೊಂದಿಗೆ ಲೀಟರ್ ಪೆಟ್ರೋಲ್ ದರ 106.54 ರೂಪಾಯಿ ಹಾಗೂ ಡೀಸೆಲ್ ದರ 95.27 ರೂಪಾಯಿ ಇದೆ. ಅಷ್ಟೇ ಅಲ್ಲದೆ, ವಿಮಾನಗಳಿಗೆ ಬಳಸುವ ಟರ್ಬೈನ್ ಇಂಧನ (ಎಟಿಎಫ್ ಅಥವಾ ಜೆಟ್ ಇಂಧನ) ಬೆಲೆಗಿಂತ ಪೆಟ್ರೋಲ್ ಈಗ ಶೇಕಡಾ 35 ರಷ್ಟು ಹೆಚ್ಚಾಗಿದೆ. ದೆಹಲಿಯಲ್ಲಿ ಎಟಿಎಫ್ ಬೆಲೆ ಪ್ರತಿ ಲೀಟರ್ಗೆ 79 ಇದೆ.
ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 112.44 ಕ್ಕೆ ಹಾಗೂ ಲೀಟರ್ ಡೀಸೆಲ್ 103.26 ರೂ. ಗೆ ಮಾರಾಟವಾಗುತ್ತಿದೆ. ಕೋಲ್ಕತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 107.12 ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 98.38 ರೂ. ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ಗೆ ಪೆಟ್ರೋಲ್ಗೆ 103.61 ರೂ. ಇದ್ದು, ಲೀಟರ್ ಡೀಸೆಲ್ 99.59 ಕ್ಕೆ ಲಭ್ಯವಿದೆ.
ಬೆಂಗಳೂರಿನಲ್ಲಿ ಎಷ್ಟಿದೆ ತೈಲ ದರ:
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 110.05ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 101.12 ರೂ. ಗೆ ಏರಿಕೆಯಾಗಿದೆ. ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ. ಕಚ್ಚಾ ತೈಲ ದರವು ಸಹ ಬ್ಯಾರೆಲ್ಗೆ 0.21 % ಏರಿಕೆಯಾಗಿದ್ದು, ಸದ್ಯಕ್ಕೆ 86.04 ಡಾಲರ್ಗೆ ತಲುಪಿದೆ.