ಕರ್ನಾಟಕ

karnataka

ETV Bharat / bharat

ಗುಡ್​​ ನ್ಯೂಸ್​..ಲೀಟರ್​ ಪೆಟ್ರೋಲ್​ ಮೇಲೆ 25 ರೂ. ಡಿಸ್ಕೌಂಟ್​! ಎಲ್ಲರಿಗೂ ಇಲ್ಲ!! - ಜಾರ್ಖಂಡ್ ಹೇಮಂತ್​ ಸೊರೆನ್​ ಸರ್ಕಾರ

Petrol prices slashed in Jharkhand: ಜಾರ್ಖಂಡ್​ನಲ್ಲಿ ಹೇಮಂತ್​ ಸೊರೆನ್​​ ನೇತೃತ್ವದ ಸರ್ಕಾರ ಎರಡು ವರ್ಷ ಪೂರೈಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಜನರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

Petrol prices slashed in  jharkhand:
Petrol prices slashed in jharkhand:

By

Published : Dec 29, 2021, 4:09 PM IST

Updated : Dec 29, 2021, 6:21 PM IST

ರಾಂಚಿ:(ಜಾರ್ಖಂಡ್​):ಜನವರಿ 26ರಿಂದ ಜಾರ್ಖಂಡ್​​ನಲ್ಲಿ ಪೆಟ್ರೋಲ್​​ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬರಲಿದೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮುಖ್ಯಮಂತ್ರಿ ಹೇಮಂತ್​ ಸೊರೆನ್​​ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಗುಡ್​ನ್ಯೂಸ್​..ಲೀಟರ್​ ಪೆಟ್ರೋಲ್​ ಮೇಲೆ 25 ರೂ. ಡಿಸ್ಕೌಂಟ್​​! ಇವರಿಗೆ ಮಾತ್ರ!!

ಸೊರೆನ್​ ನೇತೃತ್ವದ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಜನವರಿ 26ರರಿಂದ ಪೆಟ್ರೋಲ್​​ ದರದಲ್ಲಿ ಭಾರಿ ಇಳಿಕೆ ಆಗಲಿದೆ. ರಾಜ್ಯದಲ್ಲಿ ಬಿಪಿಎಲ್​ ಕಾರ್ಡ್​ ಹೊಂದಿದವರಿಗೆ ಪೆಟ್ರೋಲ್​ ​ ಬೆಲೆಯಲ್ಲಿ 25 ರೂ. ಕಡಿತಗೊಳಿಸಲಾಗುವುದು ಎಂದು ಸೊರೆನ್​ ಮಹತ್ವದ ಘೋಷಣೆ ಮಾಡಿದ್ದಾರೆ. ಬಿಪಿಎಲ್​ ಕಾರ್ಡ್​ದಾರರಿಗೆ ಪ್ರತಿ ತಿಂಗಳು 10 ಲೀಟರ್ ಪೆಟ್ರೋಲ್​​ ಕಡಿಮೆ ಬೆಲೆಗೆ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.

ಹೇಮಂತ್​ ಸೊರೆನ್​ ಸರ್ಕಾರದಿಂದ ಭರ್ಜರಿ ಗಿಫ್ಟ್​

ಇದನ್ನೂ ಓದಿರಿ:ಕಾನ್ಪುರ್​​ ಐಟಿ ದಾಳಿ​ ಈಗ ಚಿತ್ರವಾಗಿ ತೆರೆ ಮೇಲೆ... ಯಾವುದಾ ಚಿತ್ರ..? ಹೀರೋ ಯಾರು?

ರಾಂಚಿಯ ಮೊರಬಡಿ ಮೈದಾನದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಮುಖ್ಯಮಂತ್ರಿ ಹೇಮಂತ್​ ಸೊರೆನ್​​ ಈ ಮಹತ್ವದ ಘೋಷಣೆ ಮಾಡಿದ್ದಾರೆ. ವಿಶೇಷವೆಂದರೆ ಈ ನಿಯಮ ದ್ವಿಚಕ್ರ ವಾಹನ ಹೊಂದಿರುವವರಿಗೆ ಮಾತ್ರ ಅನ್ವಯವಾಗಲಿದೆ. ರಾಂಚಿಯಲ್ಲಿ ನಡೆದ ಸಮಾರಂಭದಲ್ಲಿ ಬರೋಬ್ಬರಿ 16 ಸಾವಿರ ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಸೊರೆನ್ ಮಾತನಾಡಿದರು.

Last Updated : Dec 29, 2021, 6:21 PM IST

ABOUT THE AUTHOR

...view details