ಪ್ರಾಣಿ-ಮಾನವ ಸಂಘರ್ಷ: ಇಲ್ಲಿದೆ ಕೇಂದ್ರ ಕೈಗೊಂಡ ಪರಿಹಾರ ಮಾರ್ಗಗಳು
ಇತ್ತೀಚಿನ ದಿನಗಳಲ್ಲಿ ಅರಣ್ಯದಲ್ಲಿ ರೆಸಾರ್ಟ್ ನಿರ್ಮಿಸಿ ಪ್ರವಾಸೋದ್ಯಮ ಬೆಳೆಸುವುದೇ ಅಭಿವೃದ್ಧಿ ಎನ್ನುವಂತಾಗಿದೆ. ಅರಣ್ಯ ಪ್ರದೇಶ ದಿನೇ ದಿನೆ ಸಂಕುಚಿತವಾಗುತ್ತಿದೆ. ಕೈಗಾರಿಕೆ, ನಗರೀಕರಣ, ಆರ್ಥಿಕ ಪ್ರಗತಿಯಿಂದ ಕಾಡಿನ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಮುಖ್ಯವಾಗಿ ಪ್ರಾಣಿಗಳಿಗೆ ಆಹಾರ, ನೀರು ಮತ್ತು ಸಂತಾನ ಅಭಿವೃದ್ಧಿಗೆ ಸ್ಥಳ ಬೇಕು. ಆದರೆ ಅರಣ್ಯ ಪ್ರದೇಶ ಸಂಕುಚಿತವಾಗುತ್ತಿರುವುದೇ ದೊಡ್ಡ ಸಮಸ್ಯೆ. ಹೀಗಾಗಿ ಇವುಗಳ ಪರಿಣಾಮವೆಂಬಂತೆ ಪ್ರಾಣಿ ಮತ್ತು ಮಾನವ ಸಂಘರ್ಷ ನಡೆಯುತ್ತಿದೆ.
ವನ್ಯಜೀವಿ - ಮಾನವ ಸಂಘರ್ಷ
By
Published : Feb 14, 2021, 10:54 PM IST
ಹೈದರಾಬಾದ್:ವನ್ಯಜೀವಿಗಳ ಆವಾಸ ಸ್ಥಾನಗಳ ಅಭಿವೃದ್ಧಿ ಮತ್ತು ವನ್ಯಜೀವಿಗಳ ನಿರ್ವಹಣೆಗಾಗಿ 'ಹುಲಿ ಯೋಜನೆ' ಮತ್ತು 'ಆನೆ ಯೋಜನೆ'ಯಂತಹ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರ, ಇದರ ಉತ್ತಮ ನಿರ್ವಹಣೆಗಾಗಿ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸಿನ ನೆರವು ನೀಡುತ್ತಾ ಬಂದಿದೆ. ಅಲ್ಲದೇ, ಇದು ಕಾಡು ಪ್ರಾಣಿಗಳಿಂದ ದಾಳಿಗೊಳಗಾಗುವ ವ್ಯಕ್ತಿಗಳಿಗೆ ನೀಡಬೇಕಾದ ಪರಿಹಾರ ಹಣವನ್ನು ಒಳಗೊಂಡಿದೆ. ಕಳೆದ ಮೂರು ವರ್ಷಗಳಿಂದ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಿದ ಪರಿಹಾರದ ವಿವರಗಳನ್ನು ನಾವು ನೋಡಬಹುದು.
ಸಚಿವಾಲಯವು ವನ್ಯಜೀವಿಗಳು ಮತ್ತು ಅದರ ಆವಾಸಸ್ಥಾನಗಳ ನಿರ್ವಹಣೆಗಾಗಿ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಇದರಲ್ಲಿ ನೈಸರ್ಗಿಕ ಜಲಮೂಲಗಳ ಪುನರ್ ಸ್ಥಾಪನೆ, ಕೃತಕ ಕೊಳಗಳು, ಜಲಾನಯನ ಪ್ರದೇಶಗಳ ರಚನೆ ಮತ್ತು ಸಂರಕ್ಷಿತ ಪ್ರದೇಶಗಳ ವಿವಿಧ ಸ್ಥಳಗಳಲ್ಲಿ ಆಹಾರ / ಮೇವಿನ ಮೂಲಗಳನ್ನು ಹೆಚ್ಚಿಸುವುದು ಮುಂತಾದ ಚಟುವಟಿಕೆಗಳನ್ನು ಒಳಗೊಂಡಿದೆ. ಕಾಡುಗಳ ಹೊರಗೆ ಕಾಡು ಪ್ರಾಣಿಗಳ ಪ್ರವೇಶವನ್ನು ತಡೆಗಟ್ಟಲು ಸೌರಶಕ್ತಿ ಚಾಲಿತ ವಿದ್ಯುತ್ ಬೇಲಿ, ಕಳ್ಳಿ, ಗಡಿ ಗೋಡೆ, ಪ್ರಾಣಿ ನಿರೋಧಕ ಕಂದಕಗಳು ಹಾಗೂ ಜೈವಿಕ ಬೇಲಿಗಳ ನಿರ್ಮಾಣವನ್ನು ಒಳಗೊಂಡಿದೆ.
ಕಾಡು ಹಾಗೂ ವನ್ಯಜೀವಿಗಳ ನಿರ್ವಹಣೆ ಮುಖ್ಯವಾಗಿ ಸಂಬಂಧಪಟ್ಟ ರಾಜ್ಯ-ಕೇಂದ್ರಾಡಳಿತ ಸರ್ಕಾರಗಳ ಜವಾಬ್ದಾರಿಯಾಗಿದೆ. ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ ಕಳೆದ 5 ವರ್ಷಗಳಲ್ಲಿ ಹುಲಿಗಳು ಮತ್ತು ಆನೆಗಳ ದಾಳಿಯಿಂದ ನಾಪತ್ತೆಯಾದ ಜನರ ವಿವರಗಳನ್ನು ನೀಡಲಾಗಿದೆ.
ಪಶ್ಚಿಮ ಬಂಗಾಳ ಸರ್ಕಾರವು ಒದಗಿಸಿದ ಮಾಹಿತಿಯ ಪ್ರಕಾರ, ಕಾಡು ಪ್ರಾಣಿಗಳ ದಾಳಿಯಿಂದಾಗಿ ನಾಪತ್ತೆಯಾದ ಜನರ ವಿವರಗಳು ಮತ್ತು ಡಾರ್ಜಿಲಿಂಗ್, ಕಾಲಿಂಪಾಂಗ್, ಅಲಿಪುರ್ದುರ್, ಜಲ್ಪೈಗುರಿ ಜಿಲ್ಲೆಗಳಲ್ಲಿ ಕಳೆದ 5 ವರ್ಷಗಳಲ್ಲಿ ಮಾನವ ಜೀವ ಮತ್ತು ಆಸ್ತಿಪಾಸ್ತಿ ನಷ್ಟಕ್ಕೆ ಪಾವತಿಸಿದ ಪರಿಹಾರದ ವಿವರಗಳನ್ನು ನೀಡಲಾಗಿದೆ.
2018ರಲ್ಲಿ ಕೇಂದ್ರೀಯ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ಪಾವತಿಸಬೇಕಾದ ಪರಿಹಾರವನ್ನು ಸಚಿವಾಲಯ ಹೆಚ್ಚಿಸಿದೆ:
ಕ್ರ.
ಸಂಖ್ಯೆ
ಕಾಡು ಪ್ರಾಣಿಗಳಿಂದ ಉಂಟಾಗುವ ಹಾನಿಯ ಸ್ವರೂಪ
ಪರಿಹಾರದ ಮೊತ್ತ
1
ಸಾವು-ಶಾಶ್ವತ ಊನ
5 ಲಕ್ಷ ರೂ.
2
ತೀವ್ರವಾದ ಗಾಯ
2 ಲಕ್ಷ ರೂ
3
ಸಣ್ಣ ಗಾಯ
ಚಿಕಿತ್ಸೆಯ ವೆಚ್ಚ 25000 / - ರೂ
4
ಆಸ್ತಿ / ಬೆಳೆಗಳ ನಷ್ಟ
ಸರ್ಕಾರ ನಿಗದಿ ಪಡಿಸಿದ ಮಾನದಂಡಗಳು
ಕಳೆದ 5 ವರ್ಷಗಳಲ್ಲಿ ಹುಲಿಗಳ ದಾಳಿಯಿಂದ ನಾಪತ್ತೆಯಾದವರ ವಿವರಗಳು
ರಾಜ್ಯ
2016
2017
2018
2019
2020
ಆಂಧ್ರಪ್ರದೇಶ
0
0
0
0
0
ಅರುಣಾಚಲ ಪ್ರದೇಶ
0
0
0
0
0
ಅಸ್ಸೋಂ
1
1
1
0
0
ಬಿಹಾರ
0
0
0
0
1
ಛತ್ತೀಸ್ಘಡ
0
0
0
0
0
ಜಾರ್ಖಂಡ್
0
0
0
0
0
ಕರ್ನಾಟಕ
0
0
1
4
0
ಕೇರಳ
0
0
0
0
0
ಮಧ್ಯಪ್ರದೇಶ
10
5
2
1
5
ಮಹಾರಾಷ್ಟ್ರ
19
7
2
26
0
ಮಿಜೋರಾಂ
0
0
0
0
0
ಒರಿಸ್ಸಾ
0
0
2
0
0
ರಾಜಸ್ಥಾನ
0
0
2
5
0
ತಮಿಳುನಾಡು
1
0
0
0
1
ತೆಲಂಗಾಣ
0
0
0
0
2
ಉತ್ತರ ಪ್ರದೇಶ
15
19
5
8
4
ಉತ್ತರಾಖಂಡ
2
0
1
3
0
ಪಶ್ಚಿಮ ಬಂಗಾಳ
14
12
15
3
0
ಒಟ್ಟು
62
44
31
50
13
ಕಳೆದ 5 ವರ್ಷಗಳಲ್ಲಿ ಆನೆಗಳ ದಾಳಿಯಿಂದ ಮೃತಪಟ್ಟವರ ಸಂಖ್ಯೆ
ಕ್ರ.ಸಂಖ್ಯೆ
ವಲಯ
ರಾಜ್ಯ
2015-16
2016-17
2017-18
2018-19
2019-20
1
ದ.ವಲಯ
ಆಂಧ್ರಪ್ರದೇಶ
0
2
6
7
4
2
ಉ.ವಲಯ
ಅರುಣಾಚಲ ಪ್ರದೇಶ
1
ಫ.ಇಲ್ಲ
ಫ.ಇಲ್ಲ
0
NR
3
ಉ.ವಲಯ
ಅಸ್ಸಾಂ
31
91
72
84
75
4
ಪ.ವಲಯ
ಛತ್ತೀಸ್ಘಡ
53
74
74
56
78
5
ಪೂ.ವಲಯ
ಜಾರ್ಖಂಡ್
66
59
84
87
84
6
ದ.ವಲಯ
ಕರ್ನಾಟಕ
47
49
22
12
29
7
ದ.ವಲಯ
ಕೇರಳ
6
33
15
27
12
8
ದ.ವಲಯ
ಮಹಾರಾಷ್ಟ್ರ
1
0
0
1
1
9
ಉ.ವಲಯ
ಮೇಘಾಲಯ
6
5
7
3
4
10
ಉ.ವಲಯ
ನಾಗಾಲ್ಯಾಂಡ್
1
1
0
1
0
11
ಪೂ.ವಲಯ
ಒಡಿಶಾ
89
66
105
72
117
12
ದ.ವಲಯ
ತಮಿಳುನಾಡು
49
43
49
47
58
13
ಉ.ವಲಯ
ತ್ರಿಪುರ
0
2
0
ಫ.ಇಲ್ಲ
2
14
ಉ.ವಲಯ
ಉತ್ತರ ಪ್ರದೇಶ
0
3
1
0
6
15
ಉ.ವಲಯ
ಉತ್ತರಾಖಂಡ
7
4
5
3
ಫ.ಇಲ್ಲ
16
ಉ.ವಲಯ
ಪಶ್ಚಿಮ ಬಂಗಾಳ
112
84
66
52
116
ಒಟ್ಟು
469
516
506
452
586
ಕೇಂದ್ರೀಯ ಪ್ರಾಯೋಜಿತ ಯೋಜನೆಯಡಿ ಬಿಡುಗಡೆಯಾದ ಎಕ್ಸ್-ಗ್ರೇಷಿಯಾ- ‘ವನ್ಯಜೀವಿ ಆವಾಸ ಸ್ಥಾನಗಳ ಅಭಿವೃದ್ಧಿ’ (ಡಿಡಬ್ಲ್ಯೂಹೆಚ್)
ರಾಜ್ಯಗಳು
2017-18
2018-19
2019-20
ಅಸ್ಸೋಂ
1.50
0
0
ಬಿಹಾರ
0
0
2.00
ಗುಜರಾತ್
0
22.00
0
ಹಿಮಾಚಲ ಪ್ರದೇಶ
0.50
60.00
5.00
ಕರ್ನಾಟಕ
0
0
2.00
ಕೇರಳ
0
0.50
4.80
ಮಧ್ಯಪ್ರದೇಶ
3.80
3.10
2.30
ಮೇಘಾಲಯ
0
7.00
10.00
ಮಿಜೋರಾಂ
4.50
3.00
7.50
ನಾಗಾಲ್ಯಾಂಡ್
20.00
34.00
42.00
ರಾಜಸ್ಥಾನ
21.00
30.50
22.50
ಸಿಕ್ಕಿಂ
25.50
21.00
31.00
ತಮಿಳುನಾಡು
11.00
11.00
11.00
ತ್ರಿಪುರ
0
0
0.40
ಉತ್ತರಾಖಂಡ
20.00
22.00
16.00
ಒಟ್ಟು
107.80
214.10
156.50
ಆನೆ ಯೋಜನೆ ಅಡಿಯಲ್ಲಿ ಪಾವತಿಸಿದ ಪರಿಹಾರ
ಲಕ್ಷ ರೂಗಳಲ್ಲಿ
ಕ್ರಮ.ಸಂಖ್ಯೆ
ರಾಜ್ಯ
2017-18
2018-19
2019-20
1.
ಆಂಧ್ರಪ್ರದೇಶ
6.00
5.00
70.00
2.
ಅರುಣಾಚಲ ಪ್ರದೇಶ
25.00
0.00
15.00
3.
ಅಸ್ಸೋಂ
0.00
160.00
0.00
4.
ಛತ್ತೀಸ್ಘಡ
30.00
50.60
0.00
5.
ಜಾರ್ಖಂಡ್
0.00
0.00
0.00
6.
ಕರ್ನಾಟಕ
0.00
0.00
0.00
7.
ಕೇರಳ
125.00
126.00
150.00
8.
ಮಹಾರಾಷ್ಟ್ರ
8.20
20.00
20.00
9.
ಮೇಘಾಲಯ
30.00
41.00
15.00
10.
ನಾಗಾಲ್ಯಾಂಡ್
11.18
37.68
103.00
11.
ಒಡಿಶಾ
42.305
80.00
160.00
12.
ತಮಿಳುನಾಡು
100.00
100.00
91.00
13.
ತ್ರಿಪುರ
4.00
9.00
10.00
14.
ಉತ್ತರ ಪ್ರದೇಶ
0.20
0.25
5.00
15.
ಉತ್ತರಾಖಂಡ
0.00
0.00
0.00
16.
ಪಶ್ಚಿಮ ಬಂಗಾಳ
35.00
42.50
50.00
17.
ಹರಿಯಾಣ
0.00
0.00
0.00
18.
ಬಿಹಾರ
0.00
0.00
0.00
19.
ರಾಜಸ್ಥಾನ
0.00
0.00
0.00
20.
ಪಂಜಾಬ್
0.00
0.00
0.00
21.
ಮಧ್ಯಪ್ರದೇಶ
0.00
0.00
0.00
22.
ಮಣಿಪುರ
0.00
0.00
0.00
ಒಟ್ಟು
416.885
672.03
689.00
ದೇಶದಲ್ಲಿ ಮಾನವ-ಪ್ರಾಣಿಗಳ ಸಂಘರ್ಷವನ್ನು ನಿರ್ವಹಿಸಲು ಮತ್ತು ತಗ್ಗಿಸಲು ಭಾರತ ಸರ್ಕಾರ ಕೈಗೊಂಡ ಕ್ರಮಗಳು:
1. 06.02.2021ರಂದು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಮಾನವ-ವನ್ಯಜೀವಿ ಸಂಘರ್ಷವನ್ನು ಎದುರಿಸುವ ಕುರಿತು ಸಚಿವಾಲಯವು ಸಲಹೆಯನ್ನು ನೀಡಿದೆ.
2. ವನ್ಯಜೀವಿಗಳ ಆವಾಸಸ್ಥಾನಗಳ ಅಭಿವೃದ್ಧಿ ಮತ್ತು ವನ್ಯಜೀವಿಗಳ ನಿರ್ವಹಣೆಗಾಗಿ 'ಹುಲಿ ಯೋಜನೆ' ಮತ್ತು 'ಆನೆ ಯೋಜನೆ'ಯಂತಹ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರ, ಇದರ ಉತ್ತಮ ನಿರ್ವಹಣೆಗಾಗಿ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸಿನ ನೆರವು ನೀಡುತ್ತಾ ಬಂದಿದೆ.
3. ಸೌರಶಕ್ತಿ ಚಾಲಿತ ವಿದ್ಯುತ್ ಬೇಲಿ, ಕಳ್ಳಿ ಬಳಸಿ ಜೈವಿಕ ಬೇಲಿ, ಗಡಿ ಗೋಡೆಗಳು, ಕಾಡುಗಳ ಸುತ್ತ ಪ್ರಾಣಿ ನಿರೋಧಕ ಕಂದಕ ಮುಂತಾದ ಭೌತಿಕ ಅಡೆತಡೆಗಳ ನಿರ್ಮಾಣಕ್ಕೆ ಹಣ ಹಂಚಿಕೆ ಮಾಡಲಾಗಿದೆ.
4. ಕಾಡು ಪ್ರಾಣಿಗಳಿಂದ ಉಂಟಾಗುವ ಹಾನಿಗೆ ಪರಿಹಾರವಾಗಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆರ್ಥಿಕ ನೆರವನ್ನು ಸಹ ನೀಡುತ್ತಾ ಬಂದಿದೆ.
5. ಹುಲಿ ಸಂರಕ್ಷಿತ ಅರಣ್ಯ, ರಾಷ್ಟ್ರೀಯ ಉದ್ಯಾನವನಗಳು ಮತ್ತು ಅಭಯಾರಣ್ಯಗಳ ಪ್ರಮುಖ ಪ್ರದೇಶದಿಂದ ಗ್ರಾಮಗಳನ್ನು ಸ್ವಯಂಪ್ರೇರಿತವಾಗಿ ಸ್ಥಳಾಂತರಿಸಲು ಕೇಂದ್ರೀಯ ಪ್ರಾಯೋಜಿತ ಯೋಜನೆಯಡಿ ಧನಸಹಾಯ ನೀಡಲಾಗುತ್ತಿದೆ. ಪ್ರಾಣಿ-ಮಾನವ ಸಂಘರ್ಷವನ್ನು ತಪ್ಪಿಸಲು ರಾಜ್ಯ ಸರ್ಕಾರಗಳು ಪ್ರಸ್ತಾಪಿಸಿದಂತೆ ‘ವನ್ಯಜೀವಿ ಆವಾಸ ಸ್ಥಾನಗಳ ಸಮಗ್ರ ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗಿದೆ.
6. ಮಾನವ-ಪ್ರಾಣಿಗಳ ಸಂಘರ್ಷದ ಬಗ್ಗೆ ಸಾಮಾನ್ಯ ಜನರಿಗೆ ಸಂವೇದನೆ, ಮಾರ್ಗದರ್ಶನ ಮತ್ತು ಸಲಹೆ ನೀಡಲು ಆವರ್ತಕ ಜಾಗೃತಿ ಅಭಿಯಾನಗಳು, ವಿವಿಧ ರೀತಿಯ ಮಾಧ್ಯಮಗಳ ಮೂಲಕ ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತಿದೆ.
7. ಅರಣ್ಯ ಪ್ರದೇಶಗಳಲ್ಲಿ 33 ಕೆವಿ ವಿದ್ಯುತ್ ಕೇಬಲ್‌ಗಳನ್ನು ಭೂಮಿಯ ಆಳದಲ್ಲಿ ಹೂಳಲು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ.
8. ಮಾನವ-ಹುಲಿ, ಮಾನವ-ಚಿರತೆ, ಮಾನವ-ಆನೆ ಸಂಘರ್ಷವನ್ನು ನಿರ್ವಹಿಸಲು ಭಾರತ ಸರ್ಕಾರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್‌ಒಪಿ) ಮಾರ್ಗಸೂಚಿಗಳನ್ನು ಹೊರಡಿಸಿದೆ.
9. ಕಾಡು ಪ್ರಾಣಿಗಳ ಬೆಳವಣಿಗೆಗಳ ನಿರ್ವಹಣೆಗೆ ರೋಗನಿರೋಧಕ-ಗರ್ಭನಿರೋಧಕ ಕ್ರಮಗಳನ್ನು ಕೈಗೊಳ್ಳುವ ಯೋಜನೆಗೆ ಸಚಿವಾಲಯ ಅನುಮೋದನೆ ನೀಡಿದೆ.