ಶ್ರೀನಗರ :ಕಾಶ್ಮೀರ ಪಂಡಿತರ ಹತ್ಯಾಕಾಂಡದ ಬಗ್ಗೆ ಚಿತ್ರಿಸಲಾದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಕಾಲ್ಪನಿಕ ಕಥೆಯಾಗಿದೆ. ಇದು ದೇಶದಲ್ಲಿ ಜನಾಂಗೀಯ ದ್ವೇಷ ಉಂಟು ಮಾಡುತ್ತದೆ ಎಂದು ಪೀಪಲ್ಸ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಸಜಾದ್ ಲೋನ್ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಅವರುಮಾತನಾಡಿದರು.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ತಂಡದ ಕೆಲವರು ರಾಜ್ಯಸಭಾ ಸದಸ್ಯರಾಗಲು ಈ ರೀತಿಯ ಕಾಲ್ಪನಿಕ ಕಥೆಯನ್ನಾಧರಿಸಿದ ಸಿನಿಮಾವನ್ನು ಮಾಡಿ ಕೆಲವರನ್ನು ಮೆಚ್ಚಿಸಿದ್ದಾರೆ. ಹೀಗಾಗಿ, ವಿವಾದಿತ ವಿಷಯದ ಮೇಲೆ ಸಿನಿಮಾ ರೂಪಿಸಲಾಗಿದೆ. ಸಿನಿಮಾದ ಕಥೆ ಕೇವಲ ಕಲ್ಪನೆಯಾಧಾರಿತ ಎಂದು ಟೀಕಿಸಿದ್ದಾರೆ.