ವಿದಿಶಾ(ಮಧ್ಯಪ್ರದೇಶ):ನೂರಾರು ಮೇಕೆಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರಕ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ವೇಳೆ ಜನರು ವಾಹನದಲ್ಲಿದ್ದ ಮೇಕೆ ಮರಿಗಳನ್ನು ಕದ್ದೊಯ್ದಿದ್ದಾರೆ. ಮಧ್ಯಪ್ರದೇಶದ ಸಿರೊಂಜ್ನ ಕಂಕರಖೇಡಿಯಲ್ಲಿ ಈ ಘಟನೆ ನಡೆದಿದೆ.
ಮೇಕೆ ತುಂಬಿರುವ ಟ್ರಕ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗುತ್ತಿದ್ದಂತೆ ಪಕ್ಕದ ಗ್ರಾಮದ ಜನರು ಬೈಕ್‌ಗಳಲ್ಲಿ ಬಂದು ಮೇಕೆ ಹೊತ್ತುಕೊಂಡು ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಬಂದ್ರೂ ಕೂಡ ಜನರು ತಲೆಕೆಡಿಸಿಕೊಂಡಿಲ್ಲ.
ಇದನ್ನೂ ಓದಿ:ನೋಡಿ: ಜಾನ್ಸೆನ್ ಬೌನ್ಸರ್‌ಗೆ ತಾಳ್ಮೆ ಕಳೆದುಕೊಂಡ ಬುಮ್ರಾ
ಟ್ರಕ್ ಪಲ್ಟಿಯಾಗಿದ್ದ ಸಂದರ್ಭದಲ್ಲಿ ಅದರಡಿ ಚಾಲಕ ಸಚಿನ್ ಖತಿಕ್ ಸಿಲುಕಿಕೊಂಡು ನರಳಾಡುತ್ತಿದ್ದ. ಈ ವೇಳೆ ಅಲ್ಲಿದ್ದ ಜನರು ಆತನ ಪ್ರಾಣ ಉಳಿಸುವ ಗೋಜಿಗೆ ಹೋಗಲಿಲ್ಲ. ಬದಲಿಗೆ ಮೇಕೆ ಕದ್ದೊಯ್ಯುವ ಕೆಲಸದಲ್ಲೇ ಬ್ಯುಸಿಯಾಗಿದ್ದರು. ಪರಿಣಾಮ, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಚಾಲಕ ಸ್ಥಳದಲ್ಲೇ ಕೊನೆಯುಸಿರೆಳೆದ.
ಸುಮಾರು 100ಕ್ಕೂ ಅಧಿಕ ಮೇಕೆಗಳನ್ನು ತುಂಬಿಕೊಂಡಿದ್ದ ಟ್ರಕ್ ಮಧ್ಯಪ್ರದೇಶದ ಶಿವಪುರಿಯಿಂದ ಹೈದರಾಬಾದ್ಗೆ ತೆರಳುತ್ತಿತ್ತು.