ನವದೆಹಲಿ:ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಪೆಗಾಸಸ್ ಪ್ರಕರಣ ಹೆಚ್ಚಿನ ಚರ್ಚೆಗೆ ಗ್ರಾಸವಾಗಿದ್ದು, ಇಸ್ರೇಲ್ ಮೂಲಕ ಸ್ಪೈವೇರ್ ಪೆಗಾಸಸ್ ಅಪ್ಲಿಕೇಶನ್ ವಿರುದ್ಧ ಇನ್ನಿಲ್ಲದ ಟೀಕೆಗಳ ಸುರಿಮಳೆಯಾಗುತ್ತಿದೆ. ಈ ಅಪ್ಲಿಕೇಶನ್ ಮೂಲಕ ಕೇಂದ್ರ ಸರ್ಕಾರ ದೇಶದ ಅನೇಕ ಪತ್ರಕರ್ತರು, ರಾಜಕೀಯ ಮುಖಂಡರುಗಳ ಮೊಬೈಲ್ ನಂಬರ್ ಹ್ಯಾಕ್ ಮಾಡಿದೆ ಎಂದು ಆರೋಪಿಸಲಾಗಿತ್ತು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಇಸ್ರೇಲ್ನ NSO ಪ್ರತಿಕ್ರಿಯೆ ನೀಡಿದ್ದು, ನಾವು ಯಾವುದೇ ರೀತಿಯ ತನಿಖೆಗೊಳಪಡಲು ಸಿದ್ಧ ಎಂದಿದೆ. ಮಿಲಿಟರಿ ದರ್ಜೆಯ ಸ್ಪೈವೇರ್ ಪೆಗಾಸಸ್ ಅಭಿವೃದ್ಧಿ ಮಾಡಿರುವ ಇಸ್ರೇಲ್ನ ಎನ್ಎಸ್ಒ ಪ್ರಕಾರ, ಯಾವುದೇ ಕಾರಣಕ್ಕೂ ತಂತ್ರಜ್ಞಾನದ ದುರುಪಯೋಗ ಮಾಡಿಲ್ಲ. ಇದರ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಿ, ಇನ್ಮುಂದೆ ಮಾಧ್ಯಮಗಳಿಗೆ ನಾವು ಇದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದಿದೆ.